ಕೌನ್ ಬನೇಗಾ ಕರೋಡ್ಪತಿ ಸೀಸನ್ 12ರ 2ನೇ ಕರೋಡ್ಪತಿಯಾಗಿ ಐಪಿಎಸ್ ಅಧಿಕಾರಿ ಮೋಹಿತಾ ಶರ್ಮಾ ಆಯ್ಕೆಯಾಗಿದ್ದಾರೆ.
ದೆಹಲಿ ನಾಜಿಯಾ ನಸೀಮ್ ಕೆಲ ದಿನಗಳ ಹಿಂದಷ್ಟೇ ಈ ಸೀಸನ್ನಲ್ಲಿ ಭಾಗಿಯಾಗಿ ಕೋಟ್ಯಾಧಿಪತಿಯಾಗಿದ್ದರು. ಇದೀಗ ಸೋನಿ ಎಂಟರ್ಟೇನ್ಮೆಂಟ್ ಸಾಮಾಜಿಕ ಜಾಲತಾಣದಲ್ಲಿ ತನ್ನ 2ನೇ ಕರೋಡ್ಪತಿ ಯಾರು ಅನ್ನೋದನ್ನ ಬಹಿರಂಗ ಮಾಡಿದೆ. ಈ ಎಪಿಸೋಡ್ ನವೆಂಬರ್ 17ರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.
ಎಪಿಸೋಡ್ ಆರಂಭದಿಂದಲೂ ಅಮಿತಾಬ್ ಬಚ್ಚನ್ ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಮೋಹಿತಾ ಶರ್ಮಾ ಬಹಳ ಆರಾಮಾಗಿ ಉತ್ತರ ನೀಡುವ ಮೂಲಕ 1 ಕೋಟಿ ರೂಪಾಯಿಗಳನ್ನ ತಮ್ಮದಾಗಿಸಿಕೊಂಡಿದ್ದಾರೆ.
1 ಕೋಟಿ ರೂಪಾಯಿ ಗೆದ್ದ ಮೋಹಿತಾರಿಗೆ ಬಿಗ್ ಬಿ 7 ಕೋಟಿ ರೂಪಾಯಿ ಮೌಲ್ಯದ ಜಾಕ್ಪಾಟ್ ಪ್ರಶ್ನೆ ಕೇಳಿದ್ದು ಇದಕ್ಕೆ ಮೋಹಿತಾ ಸರಿಯಾದ ಉತ್ತರ ನೀಡ್ತಾರಾ ಇಲ್ಲವಾ ಅನ್ನೋದು ನವೆಂಬರ್ 17ರಂದು ತಿಳಿಯಲಿದೆ.