ಏಪ್ರಿಲ್ 1 ರಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಹಾದುಹೋಗುವುದು ದುಬಾರಿಯಾಗಲಿದೆ. ಎನ್‌ಎಚ್‌ಎಐ ಟೋಲ್ ತೆರಿಗೆಯನ್ನು ಶೇಕಡಾ 5 ರಷ್ಟು ಹೆಚ್ಚಿಸಲು ಸಿದ್ಧತೆ ನಡೆಸಿದೆ. ಟೋಲ್ ಪ್ಲಾಜಾ ಮಾಸಿಕ ಪಾಸ್ ಕೂಡ 10 ರಿಂದ 20 ರೂಪಾಯಿಗೆ ಹೆಚ್ಚಾಗುವ ಸಾಧ್ಯತೆಯಿದೆ. ಇದು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರ ಮೇಲೆ ನೇರವಾಗಿ ಪರಿಣಾಮ ಬೀರಲಿದೆ.
ಏಪ್ರಿಲ್ 1 ರಿಂದ ಟೋಲ್ ಪ್ಲಾಜಾ ಮೂಲಕ ಹಾದುಹೋಗುವ ವಾಹನಗಳು ಹೆಚ್ಚಿದ ಟೋಲ್ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಫಾಸ್ಟಾಗ್ ಕಡ್ಡಾಯಗೊಳಿಸಿದ ನಂತರ ತೆರಿಗೆಯನ್ನು ಹೆಚ್ಚಿಸಲಾಗ್ತಿದೆ. ಎನ್‌ಎಚ್‌ಎಐ ತನ್ನ ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ತೆರಿಗೆಯನ್ನು ಹೆಚ್ಚಿಸಲಿದೆ.
ಪ್ರತಿ ಹಣಕಾಸು ವರ್ಷದಲ್ಲಿ ಎನ್‌ಎಚ್‌ಎಐ ಟೋಲ್ ತೆರಿಗೆಯನ್ನು ಹೆಚ್ಚಿಸುತ್ತದೆ. ಫಾಸ್ಟ್ಯಾಗ್ ಕಡ್ಡಾಯದ ನಂತರ ಟೋಲ್ ತೆರಿಗೆ ಹೆಚ್ಚಳ ಸಾಗಣಿಕೆದಾರರು ಮತ್ತು ಸಾಮಾನ್ಯ ಜನರ ಮೇಲೆ ಹೆಚ್ಚಿನ ಹೊರೆಯಾಗ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಸೇರಿದಂತೆ ಅನೇಕ ವಸ್ತುಗಳ ಬೆಲೆ ಕೂಡ ಗಗನಕ್ಕೇರಿದೆ. ಈ ಸಂದರ್ಭದಲ್ಲಿ ಟೋಲ್ ತೆರಿಗೆ ಹೆಚ್ಚಳ ಜನರ ಬೆನ್ನಿಗೆ ಮತ್ತಷ್ಟು ಪೆಟ್ಟು ನೀಡಿದೆ.