ನವದೆಹಲಿ: ಕೇಂದ್ರ ಸರ್ಕಾರದಿಂದ ಲಕ್ಷಾಂತರ ಪಿಂಚಣಿದಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. ಪಿಂಚಣಿ ಪಡೆದುಕೊಳ್ಳಲು ಜಂಟಿ ಬ್ಯಾಂಕ್ ಖಾತೆ ಕಡ್ಡಾಯ ಎಂಬ ನಿಯಮವನ್ನು ಸಡಿಲಗೊಳಿಸಲಾಗಿದೆ.
ಇದರಿಂದಾಗಿ ನಿವೃತ್ತ ನೌಕರರಿಗೆ ತಮ್ಮ ಸಂಗಾತಿಯೊಂದಿಗೆ ಬ್ಯಾಂಕ್ ಖಾತೆ ತೆರೆಯುವುದು ಕಡ್ಡಾಯವಾಗಿರುವುದಿಲ್ಲ. ಜಂಟಿ ಖಾತೆ ತೆರೆಯಲು ಸಾಧ್ಯವಾಗದ ಸಂದರ್ಭ ಇದ್ದರೆ ನಿಯಮ ಸಡಿಲಗೊಳಿಸಬಹುದಾಗಿದೆ.
ಕೇಂದ್ರ ಪಿಂಚಣಿ ಖಾತೆ ಸಚಿವ ಜಿತೇಂದ್ರ ಸಿಂತ್ ಅವರು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪಿಂಚಣಿ ಪಡೆಯಲು ಜಂಟಿ ಬ್ಯಾಂಕ್ ಖಾತೆ ಕಡ್ಡಾಯ ನಿಯಮವನ್ನು ಸಡಿಲಗೊಳಿಸಲಾಗಿದೆ ಎಂದು ಹೇಳಿದ್ದಾರೆ.