ನ್ಯೂಯಾರ್ಕ್: ಟೆಕ್ ಕಂಪನಿಗಳಿಂದ ಮತ್ತೆ 20 ಸಾವಿರ ಉದ್ಯೋಗ ಕಡಿತ ಮಾಡಲಾಗುವುದು. ಈ ವರ್ಷ ಕಂಪನಿಗಳಲ್ಲಿ ಕೆಲಸ ಕಳೆದುಕೊಂಡವರ ಸಂಖ್ಯೆ 1.71 ಲಕ್ಷಕ್ಕೆ ಏರಿಕೆಯಾಗಿದೆ.
ಇದಾದ ನಂತರವೂ ಉದ್ಯೋಗ ಕಡಿತ ಮುಂದುವರೆದಿದ್ದು, ಮೆಟಾ, ಡಿಸ್ನಿ, ಆರ್ನೆಸ್ಟ್ ಅಂಡ್ ಯಂಗ್ ಕಂಪನಿಗಳು 20,000 ನೌಕರರನ್ನು ವಜಾ ಮಾಡುವುದಾಗಿ ಘೋಷಿಸಿದೆ.
ಫೇಸ್ಬುಕ್, ವಾಟ್ಸಾಪ್ ಹಾಗೂ ಇನ್ಸ್ಟಾ ಮಾತೃ ಸಂಸ್ಥೆವ ಮೆಟಾ 10 ಸಾವಿರ ಉದ್ಯೋಗಿಗಳನ್ನು ಕೈಬಿಡಲಿದೆ. ಡಿಸ್ನಿ 7 ಸಾವಿರ ಉದ್ಯೋಗಿಗಳನ್ನು ಕೈ ಬಿಡಲಿದೆ. ಅದೇ ರೀತಿ ಆರ್ನೆಸ್ಟ್ ಅಂಡ್ ಯಂಗ್ 3,000 ಉದ್ಯೋಗಿಗಳನ್ನು ತೆಗೆದುಹಾಕುವುದಾಗಿ ಘೋಷಿಸಿದೆ.
ಎಲೆಕ್ಟ್ರಿಕ್ ವಾಹನ ತಯಾರಕ ಲೂಸಿಡ್ ಕಂಪನಿ 13,000, ವಿಡಿಯೋ ಗೇಮ್ಸ್ ನ ಎಲೆಕ್ಟ್ರಿಕ್ ಆರ್ಟ್ಸ್ 800, ವರ್ಜಿನ್ ಆರ್ಬಿಟ್ 625 ಉದ್ಯೋಗಿಗಳನ್ನು ಈ ವಾರ ಕೈ ಬಿಟ್ಟಿವೆ. ಮುಂದಿನ 18 ತಿಂಗಳಲ್ಲಿ ಶೇಕಡ 2.6 ಉದ್ಯೋಗಿಗಳನ್ನು ಕೈ ಬಿಡುವುದಾಗಿ ಆಕ್ಸೆಂಚರ್ ಘೋಷಿಸಿದೆ.