ಬೆಂಗಳೂರು: ಭಾರತ ನೌಕಾದಳ, ಸೇನೆಯ ಫೋಟೋವನ್ನು ಪಾಕಿಸ್ತಾನಕ್ಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಹೈಕೋರ್ಟ್ ಜಿತೇಂದರ್ ಸಿಂಗ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ಪಾಕಿಸ್ತಾನದ ಮೂಲದ ವ್ಯಕ್ತಿಗಳೊಂದಿಗೆ ಸೇರಿ ಒಳಸಂಚು ನಡೆಸಿದ ಆರೋಪ ಈತನ ಮೇಲಿದೆ. ಪಾಕಿಸ್ತಾನದ ಐಎಸ್ಐ ಜೊತೆಗೆ ಮಾಹಿತಿ ಹಂಚಿಕೊಂಡ ಆರೋಪದ ಮೇಲೆ ಭಯೋತ್ಪಾದನೆ ನಿಗ್ರಹದಳ ಆರೋಪಿಯನ್ನು ಬಂಧಿಸಿತ್ತು.
ಸೇನೆಯ ಸಮವಸ್ತ್ರವನ್ನು ಧರಿಸಿ ಆರೋಪಿ ಮಾಹಿತಿ ಕಲೆ ಹಾಕಿದ್ದ. ಅಲ್ಲದೇ, ಸೇನೆಯ ರಹಸ್ಯ ಮಾಹಿತಿಯ ಫೋಟೋಗಳನ್ನು ಹಂಚಿಕೊಂಡಿದ್ದ. ತಾನು ಕೇವಲ ಪಾಕಿಸ್ತಾನ ಯುವತಿ ಜೊತೆ ಚಾಟ್ ಮಾಡಿದ್ದೇನೆ ಎಂದು ವಾದ ಮಂಡಿಸಿದ್ದು, ಹೈಕೋರ್ಟ್ ಏಕ ಸದಸ್ಯ ಪೀಠ ಜಿತೇಂದರ್ ಸಿಂಗ್ ವಾದ ಒಪ್ಪಿಲ್ಲ. ಸೂಕ್ಷ್ಮ ಮಾಹಿತಿ ಹಂಚಿಕೊಂಡಿರುವುದರಿಂದ ಭದ್ರತೆಗೆ ಧಕ್ಕೆಯಾಗುತ್ತದೆ. ಪಾಕಿಸ್ತಾನ ಈ ಸ್ಥಳಗಳನ್ನು ಗುರಿಯಾಗಿಸಿಕೊಳ್ಳಬಹುದು ಎಂದು ಹೈಕೋರ್ಟ್ ನ್ಯಾ.ಕೆ. ನಟರಾಜನ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದ್ದು, ಜಾಮೀನು ಅರ್ಜಿ ವಜಾಗೊಳಿಸಿದೆ.