ಮುಂಬೈ: ರಿಲಯನ್ಸ್ ಜಿಯೋ ಫೋನ್ ಗ್ರಾಹಕರಿಗೆ ಮಾಸಿಕ 300 ನಿಮಿಷ ಉಚಿತ ಕರೆ ಸೌಲಭ್ಯ ನೀಡಲಾಗುವುದು.
ಕೋವಿಡ್ ಕಾರಣದಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಗ್ರಾಹಕರಿಗೆ ಜಿಯೋ ಎರಡು ವಿಶೇಷ ರಿಚಾರ್ಜ್ ಯೋಜನೆಗಳನ್ನು ಪ್ರಕಟಿಸಿದೆ. ರಿಚಾರ್ಜ್ ಮಾಡಿಸಲು ಸಾಧ್ಯವಿಲ್ಲದ ಜಿಯೋ ಗ್ರಾಹಕರು ಸೋಂಕು ಇರುವವರೆಗೆ ಪ್ರತಿ ತಿಂಗಳು 300 ನಿಮಿಷ ಉಚಿತ ಕರೆ ಮಾಡಬಹುದಾಗಿದೆ.
ಅದೇ ರೀತಿ ರಿಚಾರ್ಜ್ ಮಾಡಿಸುವ ಗ್ರಾಹಕರಿಗೆ 300 ನಿಮಿಷ ಹೆಚ್ಚುವರಿ ರಿಚಾರ್ಜ್ ಸೌಲಭ್ಯ ಲಭ್ಯವಾಗಲಿದೆ. ಕೊರೋನಾದಿಂದಾಗಿ ಸಂಕಷ್ಟದಲ್ಲಿರುವ ಗ್ರಾಹಕರಿಗೆ ಅನುಕೂಲವಾಗುವಂತೆ ಮಾಸಿಕ 300 ನಿಮಿಷ ಉಚಿತ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಲಾಗಿದೆ.