ಮುಂಬೈ: ಅಮೆರಿಕ ಮೂಲದ ಚೀನಾ ವ್ಯಕ್ತಿ ಒಡೆತನದ ಜೂಮ್ ವಿಡಿಯೋ ಕಾನ್ಫರೆನ್ಸ್ ಆಪ್ ಗೆ ಸೆಡ್ಡು ಹೊಡೆಯುವಂತೆ ಜಿಯೋ ಮೀಟ್ ಹೊಸ ವಿಡಿಯೋ ಕಾನ್ಫರೆನ್ಸ್ ಆಪ್ ಬಿಡುಗಡೆ ಮಾಡಿದೆ.
ಜೂಮ್ ಹಾಗೂ ಗೂಗಲ್ ಮೀಟ್ ನಂತೆಯೇ ಜಿಯೋ ಮೀಟ್ ನಲ್ಲಿ ಮಿತಿಯಿಲ್ಲದೆ ಉಚಿತ ವೀಡಿಯೊ ಕರೆಗಳನ್ನು 720ಪಿ ಹೈಡೆಫಿನಿಷನ್ ಗುಣಮಟ್ಟದಲ್ಲಿ ಮಾಡಲು ಬಳಕೆದಾರರಿಗೆ ಅವಕಾಶವಿದೆ.
ಒಂದೇ ಸಲಕ್ಕೆ 100 ಮಂದಿ ಕರೆಯಲ್ಲಿ ಭಾಗವಹಿಸಬಹುದಾಗಿದೆ. ಯಾವುದೇ ಸಮಯದ ಮಿತಿ ಇಲ್ಲದೆ 24 ತಾಸುಗಳ ಕಾಲ ಈ ಸೇವೆಯನ್ನು ಬಳಸಬಹುದು ಎಂದು ಹೇಳಲಾಗಿದೆ. ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಕಂಪನಿ ಬಿಡುಗಡೆ ಮಾಡಿರುವ ಜಿಯೋ ಮೀಟ್ ಆಪ್ ಉಚಿತವಾಗಿದ್ದು, ಪ್ರತಿ ಕರೆಗೂ ಪಾಸ್ ವರ್ಡ್ ಸೆಟ್ ಮಾಡಿಕೊಳ್ಳಬಹುದಾಗಿದೆ. ಜೊತೆಗೆ ಬಳಕೆದಾರರ ಅನುಕೂಲಕ್ಕಾಗಿ ಸೇಫ್ ಡ್ರೈವಿಂಗ್ ಮೋಡ್, ವೇಯ್ಟಿಂಗ್ ರೂಮ್ ಆಯ್ಕೆ ಇದೆ. ಮತ್ತೊಬ್ಬರ ಕರೆಯಲ್ಲಿ ಭಾಗವಹಿಸಲು ಅನುಮತಿ ಕೇಳುವ ಅವಕಾಶ ಕೂಡ ಇದೆ ಎಂದು ಹೇಳಲಾಗಿದೆ.