ರಿಲಾಯನ್ಸ್ ಜಿಯೋ ಇತಿಹಾಸ ಸೃಷ್ಟಿಸಿದೆ. 40 ಕೋಟಿ ಗ್ರಾಹಕರನ್ನು ಹೊಂದಿದ ದೇಶದ ಮೊದಲ ಟೆಲಿಕಾಂ ಸೇವಾ ಕಂಪನಿಯಾಗಿ ಹೊರಹೊಮ್ಮಿದೆ. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ವರದಿಯ ಪ್ರಕಾರ, ಕಂಪನಿಯು ಜುಲೈನಲ್ಲಿ 35 ಲಕ್ಷ ಹೊಸ ಗ್ರಾಹಕರನ್ನು ಹೊಂದಿತ್ತು. ಜುಲೈನಲ್ಲಿ ದೇಶದ ಒಟ್ಟು ಟೆಲಿಕಾಂ ಚಂದಾದಾರರ ಸಂಖ್ಯೆ ಸ್ವಲ್ಪ ಹೆಚ್ಚಳವಾಗಿ 116.4 ಕೋಟಿಯಾಗಿತ್ತು. ಜುಲೈನಲ್ಲಿ ರಿಲಾಯನ್ಸ್ ಜಿಯೋದ ಈ ಸಂಖ್ಯೆ 116 ಕೋಟಿ ಆಗಿತ್ತು.
ಟ್ರಾಯ್ ಪ್ರಕಾರ, ಜುಲೈನಲ್ಲಿ ಮೊಬೈಲ್ ಫೋನ್ ಸಂಪರ್ಕ ಹೊಂದಿದವರ ಸಂಖ್ಯೆ 114.4 ಕೋಟಿಯಾಗಿತ್ತು. ಜೂನ್‌ನಲ್ಲಿ ಈ ಸಂಖ್ಯೆ 114 ಕೋಟಿ ಆಗಿತ್ತು. ನಗರ ಪ್ರದೇಶದಲ್ಲಿ 61.9 ಕೋಟಿ ಮತ್ತು ಗ್ರಾಮೀಣ ಪ್ರದೇಶದಲ್ಲಿ 52.1 ಕೋಟಿ ಮೊಬೈಲ್ ಸಂಪರ್ಕ ಹೊಂದಿದ್ದರು. ಹಲವಾರು ವರ್ಷಗಳ ನಂತರ ಜುಲೈನಲ್ಲಿ ಸ್ಥಿರ ಲೈನ್ ಸಂಪರ್ಕಗಳ ಸಂಖ್ಯೆ ಹೆಚ್ಚಳ ಕಂಡಿದೆ. ಅದು ಜುಲೈನಲ್ಲಿ 1,98,20,419 ರಷ್ಟಾಗಿದೆ. ಜಿಯೋ ಮತ್ತು ಇತರ ಖಾಸಗಿ ಕಂಪನಿಗಳು ಸಹ ಇದರಲ್ಲಿ ಪ್ರಮುಖ ಪಾತ್ರವಹಿಸಿವೆ.
ಭಾರತೀಯ ಮಾರುಕಟ್ಟೆಯಲ್ಲಿ ರಿಲಯನ್ಸ್ ಜಿಯೋ ಪಾಲು 40,08,03,819 ಚಂದಾದಾರರೊಂದಿಗೆ ಶೇಕಡಾ 35.03 ಕ್ಕೆ ತಲುಪಿದೆ. ಜುಲೈನಲ್ಲಿ ಏರ್ಟೆಲ್ 32.6 ಲಕ್ಷ ಹಾಗೂ ಬಿಎಸ್ಎನ್ಎಲ್ 32.6 ಲಕ್ಷ ಮೊಬೈಲ್ ಚಂದಾದಾರರನ್ನು ಹೊಂದಿದೆ. ವೊಡಾಫೋನ್ 37 ಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ಕಳೆದುಕೊಂಡಿದೆ.