ರಿಲಾಯನ್ಸ್ ಜಿಯೋ, ಗ್ರಾಹಕರನ್ನು ಸೆಳೆಯಲು ಸಾಕಷ್ಟು ಹೊಸ ಯೋಜನೆಗಳನ್ನು ಜಾರಿಗೆ ತರ್ತಿರುತ್ತದೆ. ಈಗ ತನ್ನ 11 ರೂಪಾಯಿ ಪ್ಲಾನ್ ನಲ್ಲಿ ಬದಲಾವಣೆ ಮಾಡಿದೆ. ಜಿಯೋದ 11 ರೂಪಾಯಿ 4ಜಿ ಯೋಜನೆಯಲ್ಲಿ ಗ್ರಾಹಕರಿಗೆ 1ಜಿಬಿ ಡೇಟಾ ಲಭ್ಯವಾಗಲಿದೆ. ಮೊದಲು ಈ ಯೋಜನೆಯಲ್ಲಿ ಗ್ರಾಹಕರಿಗೆ 800 ಎಂಬಿ ಡೇಟಾ ಸಿಗ್ತಿತ್ತು.
ಜಿಯೋದ 11 ರೂಪಾಯಿ ಪ್ಲಾನ್ ಗೆ ಯಾವುದೇ ಸಿಂಧುತ್ವವಿಲ್ಲ. ಇದು ಆಡ್ ಆನ್ ಪ್ಲಾನ್ ಆಗಿದೆ. ಮೂಲ ಯೋಜನೆ ಸಿಂಧುತ್ವದಲ್ಲಿ ಇದನ್ನು ರಿಚಾರ್ಜ್ ಮಾಡಬೇಕು. ಜಿಯೋ ಬಳಿ 21 ರೂಪಾಯಿ, 51 ರೂಪಾಯಿ, 101 ರೂಪಾಯಿಯ ಆಡ್ ಆನ್ ಯೋಜನೆಯಿದೆ. ಈ ಯೋಜನೆಯಲ್ಲಿ ಕ್ರಮವಾಗಿ 2ಜಿಬಿ, 6ಜಿಬಿ ಹಾಗೂ 12ಜಿಬಿ ಡೇಟಾ ಲಭ್ಯವಿದೆ.
ಜಿಯೋ ಬಳಿ ಸ್ಟ್ಯಾಂಡ್ ಅಲೋನ್ ಯೋಜನೆ ಕೂಡ ಇದೆ. ಇದ್ರ ಬೆಲೆ 151, 201 ಮತ್ತು 251 ರೂಪಾಯಿಯಾಗಿದೆ. ಇದು ವರ್ಕ್ ಫ್ರಂ ಹೋಮ್ ವಿಭಾಗದಲ್ಲಿ ಬರುತ್ತದೆ. ಇದ್ರಲ್ಲಿ ಕ್ರಮವಾಗಿ 30ಜಿಬಿ, 40 ಜಿಬಿ ಹಾಗೂ 50 ಜಿಬಿ ಡೇಟಾ ಸಿಗುತ್ತದೆ. ಈ ಮೂರು ಯೋಜನೆಗಳು 30 ದಿನಗಳ ಸಿಂಧುತ್ವದಲ್ಲಿ ಬರುತ್ತವೆ.
ಏರ್ಟೆಲ್ ಕೂಡ ಬುಧವಾರ ಹೊಸ ಎರಡು ವೋಚರ್ ಪ್ಲಾನ್ ಬಿಡುಗಡೆ ಮಾಡಿದೆ. ಇದ್ರ ಬೆಲೆ 78 ರೂಪಾಯಿ ಹಾಗೂ 248 ರೂಪಾಯಿ ಪ್ಲಾನ್ ಗಳಾಗಿವೆ. ಇದ್ರಲ್ಲಿ ಕ್ರಮವಾಗಿ 5ಜಿಬಿ ಮತ್ತು 25 ಜಿಬಿ ಡೇಟಾ ಲಭ್ಯವಿದೆ.