ದೇಶದ ಅತಿದೊಡ್ಡ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಎರಡು ಉತ್ತಮ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಈ ಪ್ಲಾನ್ ಗಳು 100 ರೂಪಾಯಿಗಿಂತ ಕಡಿಮೆ ಬೆಲೆಗೆ ಸಿಗ್ತಿದೆ. ಒಂದು 39 ರೂಪಾಯಿ ಯೋಜನೆಯಾದ್ರೆ ಇನ್ನೊಂದರ ಬೆಲೆ 69 ರೂಪಾಯಿ.
ಜಿಯೋ ಗ್ರಾಹಕರು 39 ರೂಪಾಯಿ ಪ್ರಿಪೇಯ್ಡ್ ಯೋಜನೆಯನ್ನು ಸಕ್ರಿಯಗೊಳಿಸಿದರೆ ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ಕರೆ ಮತ್ತು 100 ಎಸ್‌ಎಂಎಸ್ ಸಿಗಲಿದೆ. ಜಿಯೋ ಅಪ್ಲಿಕೇಶನ್‌ಗಳ ಚಂದಾದಾರಿಕೆ ಮತ್ತು 100 ಎಂಬಿ ಹೈಸ್ಪೀಡ್ ನ 4 ಜಿ ಡೇಟಾ ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ. ಈ ಯೋಜನೆ ಸಿಂಧುತ್ವ 14 ದಿನಗಳು.
69 ರೂಪಾಯಿಗಳ ಮತ್ತೊಂದು ಪ್ರಿಪೇಯ್ಡ್ ಯೋಜನೆಯನ್ನು ಸಕ್ರಿಯಗೊಳಿಸಿದರೆ, ಎಲ್ಲಾ ನೆಟ್‌ವರ್ಕ್‌ಗಳಿಗೆ ಅನಿಯಮಿತ ಕರೆ ಮತ್ತು ಪ್ರತಿ ದಿನ 100 ಎಸ್‌ಎಂಎಸ್ ಸೌಲಭ್ಯ ಸಿಗಲಿದೆ. ಪ್ರತಿದಿನ 500 ಎಂಬಿ ಡೇಟಾ ಗ್ರಾಹಕರಿಗೆ ಸಿಗಲಿದೆ. ಗ್ರಾಹಕರಿಗೆ ಎಲ್ಲಾ ಜಿಯೋ ಅಪ್ಲಿಕೇಶನ್‌ಗಳ ಉಚಿತ ಚಂದಾದಾರಿಕೆ ಸಿಗಲಿದೆ. ಈ ಯೋಜನೆಯ ಸಿಂಧುತ್ವ 14 ದಿನ.