alex Certify ಜಿಯೋ ಗ್ರಾಹಕರಿಗೆ ಶಾಕ್ ನೀಡುತ್ತೆ ಈ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಯೋ ಗ್ರಾಹಕರಿಗೆ ಶಾಕ್ ನೀಡುತ್ತೆ ಈ ಸುದ್ದಿ

ಟೆಲಿಕಾಂ ರೆಗ್ಯೂಲೇಟರಿ ಅಥಾರಟಿ ಆಫ್​ ಇಂಡಿಯಾ ನೀಡಿದ ಮಾಹಿತಿ ಪ್ರಕಾರ ರಿಲಾಯನ್ಸ್​ ಜಿಯೋ ಅಕ್ಟೋಬರ್​ನಲ್ಲಿ ತನ್ನ ಸರಾಸರಿ ಡೌನ್​​ಲೋಡ್​ ವೇಗದಲ್ಲಿ 1.5 ಎಂಬಿಪಿಎಸ್​​ ಇಳಿಕೆ ಕಂಡಿದೆ.

ಆದರೂ ಕೂಡ ಮುಂಬೈ ಪ್ರಧಾನ ಕಚೇರಿ ಟೆಲ್ಕೋ 17.8 ಎಂಬಿಪಿಎಸ್​​ ವೇಗ ತಲುಪೋ ಮೂಲಕ 4ಜಿ ಡೌನ್​ಲೋಡ್​ ವೇಗದಲ್ಲಿ ತನ್ನ ಮುನ್ನಡೆ ಕಾಯ್ದುಕೊಂಡಿದೆ.

ವೋಡಾಫೋನ್​ ಹಾಗೂ ಐಡಿಯಾ ಕಂಪನಿ ಕಳೆದ ವರ್ಷವೇ ವಿಲೀನವಾಗಿದ್ದರೂ ಸಹ ಟ್ರಾಯ್​ ಇವೆರಡರ ವೇಗವನ್ನ ಪ್ರತ್ಯೇಕವಾಗಿ ಎಣಿಸುತ್ತಿರೋದು ಗಮನಾರ್ಹವಾಗಿದೆ.

ಟ್ರಾಯ್​ ಮೈಸ್ಪೀಡ್​ ಪೋರ್ಟಲ್​​ನಲ್ಲಿ ಲಭ್ಯವಿರುವ ಇತ್ತೀಚಿನ ಮಾಹಿತಿ ಪ್ರಕಾರ ಅಕ್ಟೋಬರ್​ನಲ್ಲಿ 4 ಜಿ ಡೌನ್​ಲೋಡ್​​​ ವೇಗದಲ್ಲಿ ಜಿಯೋ ತನ್ನ ಪ್ರಾಬಲ್ಯ ಮುಂದುವರಿಸಿದೆ. ಅಕ್ಟೋಬರ್​ನಲ್ಲಿ ಜಿಯೋದ ಸರಾಸರಿ ಡೌನ್​ಲೋಡ್​ ವೇಗ 17.8 ಎಂಬಿಪಿಎಸ್​​​ ರಷ್ಟು ದಾಖಲಾಗಿದೆ. ಆದರೆ ಸೆಪ್ಟೆಂಬರ್​ ತಿಂಗಳಿಗೆ ಹೋಲಿಸಿದ್ರೆ ಈ ವೇಗ ಕಡಿಮೆ. ಸೆಪ್ಟೆಂಬರ್​ ತಿಂಗಳಲ್ಲಿ 19.1 ಎಂಬಿಪಿಎಸ್​​ ಡೌನ್​ಲೋಡ್​ ವೇಗ ದಾಖಲಾಗಿತ್ತು.

ಜಿಯೋದ ಬಳಿಕ ಐಡಿಯಾ 9.1 ಎಂಬಿಪಿಎಸ್​ ಡೌನ್​ಲೋಡ್​ ಸ್ಪೀಡ್​ನೊಂದಿಗೆ ತನ್ನ 2ನೇ ಸ್ಥಾನವನ್ನ ಉಳಿಸಿಕೊಂಡಿದೆ. ಕಳೆದ ತಿಂಗಳು 8.6 ಎಂಬಿಪಿಎಸ್​ ವೇಗ ದಾಖಲಿಸಿದ್ದ ಐಡಿಯಾ ಈ ಬಾರಿ 0.5 ಎಂಬಿಪಿಎಸ್​ ಏರಿಕೆ ಕಂಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...