ಕೊರೊನಾ ಅವಧಿಯಲ್ಲಿ ಅಗ್ಗದ ಯೋಜನೆಗಳನ್ನು ಗ್ರಾಹಕರು ಹುಡುಕುತ್ತಿದ್ದಾರೆ. ಟೆಲಿಕಾಂ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಅಗ್ಗದ ಯೋಜನೆಗಳನ್ನು ಬಿಡುಗಡೆ ಮಾಡ್ತಿವೆ. ಇದ್ರಲ್ಲಿ ಜಿಯೋ ಹಿಂದೆ ಬಿದ್ದಿಲ್ಲ. ಜಿಯೋ ಅಗ್ಗದ ಯೋಜನೆಯಲ್ಲಿ ಗ್ರಾಹಕರಿಗೆ ಅನೇಕ ಪ್ರಯೋಜನಗಳನ್ನು ನೀಡ್ತಿದೆ.
ಜಿಯೋದ ಅಗ್ಗದ ಪ್ರಿಪೇಯ್ಡ್ ಯೋಜನೆ ಬೆಲೆ 98 ರೂಪಾಯಿ. ಈ ಯೋಜನೆ ಸಿಂಧುತ್ವ 14 ದಿನಗಳು. ಇದ್ರಲ್ಲಿ ಬಳಕೆದಾರರಿಗೆ ಪ್ರತಿ ದಿನ 1.5 ಜಿಬಿ ಡೇಟಾ ಸಿಗಲಿದೆ. ಅಂದ್ರೆ 14 ದಿನಗಳಲ್ಲಿ ಬಳಕೆದಾರರಿಗೆ ಒಟ್ಟು 21 ಜಿಬಿ ಡೇಟಾ ಸಿಗಲಿದೆ.
ಜಿಯೋದ 98 ರೂಪಾಯಿ ಈ ಯೋಜನೆಯಲ್ಲಿ ಡೇಟಾ ಜೊತೆ ಇನ್ನೂ ಅನೇಕ ಪ್ರಯೋಜನ ಸಿಗ್ತಿದೆ. ಗ್ರಾಹಕರು ಯಾವುದೇ ನಂಬರ್ ಗೆ ಉಚಿತ ಕರೆ ಮಾಡಬಹುದು. ಜಿಯೋ ಅಪ್ಲಿಕೇಶನ್ಗಳಿಗೆ ಉಚಿತ ಚಂದಾದಾರಿಕೆ ಸಿಗ್ತಿದೆ. ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ನ್ಯೂಸ್ ಮತ್ತು ಜಿಯೋ ಸೆಕ್ಯೂರಿಟಿ ಇತ್ಯಾದಿ ಸೇರಿವೆ. ಕಳೆದ ವರ್ಷ ಈ ಯೋಜನೆಯನ್ನು ಕಂಪನಿ ಬಂದ್ ಮಾಡಿತ್ತು. ಆದ್ರೆ ಈಗ ಮತ್ತೆ ಈ ಯೋಜನೆ ಲಾಭವನ್ನು ಗ್ರಾಹಕರಿಗೆ ನೀಡ್ತಿದೆ.