ತಮ್ಮ ಸೇವೆಗಳ ಪ್ಯಾಕೇಜ್‌ಗಳ ಕಾಲಾವಧಿಗೆ ಸಂಬಂಧಿಸಿದಂತೆ ಮಧ್ಯ ಪ್ರವೇಶ ಮಾಡದಿರಲು ಟೆಲಿಕಾಂ ಸಂಸ್ಥೆಗಳಾದ ರಿಲಯನ್ಸ್ ಜಿಯೋ, ಭಾರ್ತಿ ಏರ್ಟೆಲ್, ಹಾಗೂ ವೊಡಾಫೋನ್ ಐಡಿಯಾಗಳು ಕೋರಿಕೊಂಡಿವೆ.
ಹೀಗೆ ಮಾಡುವುದರಿಂದ ತಮ್ಮ ಗ್ರಾಹಕರಿಗೆ ತಾವು ಕೊಡಮಾಡುವ ಸೇವೆಗಳಲ್ಲಿ ಅಡಚಣೆಯುಂಟಾಗುವುದಲ್ಲದೇ, ಮೊಬೈಲ್ ಸೇವಾದರಗಳ ಪ್ಲಾನ್‌ಗಳಲ್ಲಿ ವ್ಯತ್ಯಯವಾಗುವಂತೆ ಆಗುತ್ತದೆ ಎಂದು ಈ ಸೇವಾದಾರ ಸಂಸ್ಥೆಗಳು ತಿಳಿಸಿವೆ.
ಕನಿಷ್ಠ ಒಂದು ತಿಂಗಳ ಮಟ್ಟಿಗೆ (30 ದಿನಗಳು), ವಿಶೇಷ ಟಾರಿಫ್ ವೌಚರ್‌ಗಳು, ಕಾಂಬೋ ವೌಚರ್ ಹಾಗೂ ಪ್ಲಾನ್ ವೌಚರ್‌ಗಳನ್ನು ವಿತರಿಸಲು ಸೂಚಿಸಿ, ಟೆಲಿಕಾಂ ಮಾರುಕಟ್ಟೆ ದಿಗ್ಗಜ ಜಿಯೋ, ಟ್ರಾಯ್ (ಭಾರತೀಯ ಟೆಲಿಕಾಂ ನಿಯಂತ್ರಕ ಪ್ರಾಧಿಕಾರ) ಸುತ್ತೋಲೆ ಹೊರಡಿಸಬೇಕೆಂದು ಆಗ್ರಹಿಸಿದೆ. ಈ ಮೂಲಕ 28 ದಿನಗಳ ಪ್ಯಾಕ್ ಬಗ್ಗೆ ಬಳಕೆದಾರರ ದೂರುಗಳಿಗೆ ಪರಿಹಾರ ಕೊಡಬೇಕೆಂದು ಜಿಯೋ ಕೋರಿದೆ.
ಪದೇ ಪದೇ ಹಸಿವಾಗುತ್ತಾ….? ಹಾಗಿದ್ರೆ ಇದನ್ನು ಓದಿ….
“ಎಲ್ಲಾ ಟ್ಯಾರಿಫ್‌ಗಳ ವಾಯಿದೆಯನ್ನು ಏಕರೂಪಗೊಳಿಸಿ, 1 ದಿನ/7 ದಿನಗಳು/15 ದಿನಗಳು ಹಾಗೂ ಒಂದು ತಿಂಗಳ ಪ್ಯಾಕೇಜ್‌ಗಳನ್ನು ವಿತರಿಸಿ’ ಮಾರುಕಟ್ಟೆಯಲ್ಲಿರುವ ಎಲ್ಲಾ ವಾಯಿದೆ ಅವಧಿಗಳನ್ನು ಅಮಾನ್ಯಗೊಳಿಸಬೇಕೆಂದು ಕೋರಿರುವ ಮೊಬೈಲ್ ಬಳಕೆದಾರರ ಮುಂಚೂಣಿ ಸಂಘಟನೆಯಾದ ಕನ್ಸ್ಯೂಮರ್ ವಾಯ್ಸ್, “ಒಂದು ತಿಂಗಳ ವಾಯಿದೆ ಎಂದರೆ, ಮುಂದಿನ ತಿಂಗಳ ಅದೇ ದಿನದಂದು ಪ್ಲಾನ್ ನವೀಕರಣ ಮಾಡಿಕೊಳ್ಳುವುದು” ಎಂದು ಟ್ರಾಯ್‌ಗೆ ತಾನು ಕೊಟ್ಟ ಮನವಿಯಲ್ಲಿ ತಿಳಿಸಿದೆ.
ಕುತೂಹಲ ಮೂಡಿಸಿದ ಬಿಜೆಪಿ ಬೆಳವಣಿಗೆ, ಇಂದಿನಿಂದ ಅರುಣ್ ಸಿಂಗ್ ಸರಣಿ ಸಭೆ
ಆದರೆ ಹೀಗೆ ಮಾಡುವುದರಿಂದ ತಾಂತ್ರಿಕ ಸಮಸ್ಯೆಗಳು ಎದುರಾಗಲಿದ್ದು, ಸದ್ಯ ಚಾಲ್ತಿಯಲ್ಲಿರುವಂತೆಯೇ ಪ್ಲಾನ್‌ಗಳ ವಾಯಿದೆ ನೀತಿಯನ್ನು ಮುಂದುವರೆಸಲು ಅಡಚಣೆ ಮಾಡದಿರಲು ಮೊಬೈಲ್ ಸೇವಾದಾರ ಸಂಸ್ಥೆಗಳು ಟ್ರಾಯ್‌ಗೆ ಕೋರಿವೆ.