ವಿಶ್ವದ ಶ್ರೀಮಂತರ ಸಾಲಿನಲ್ಲಿ 3 ವರ್ಷಗಳಿಗಿಂತ ಹೆಚ್ಚು ಕಾಲ ಕಳೆದ ತಿಂಗಳವರೆಗೆ ನಂಬರ್ ಒನ್ ಸ್ಥಾನದಲ್ಲಿದ್ದ ಜೆಫ್ ಬೆಜೋಸ್ ಮತ್ತೆ ವಿಶ್ವದ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ.
ಕಳೆದ ತಿಂಗಳಿಂದ ಮೊದಲ ಸ್ಥಾನದಲ್ಲಿದ್ದ ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಮೊದಲ ಸ್ಥಾನದಿಂದ ಕುಸಿದಿದ್ದಾರೆ. ಎಲಾನ್ ಮಸ್ಕ್ ಅವರ ಟೆಸ್ಲಾ ಇಂಕ್ ಶೇರುಗಳು ಮಂಗಳವಾರ ಶೇಕಡ 2.4 ಕುಸಿದಿದ್ದು, ಇದರ ಪರಿಣಾಮ ಎಲಾನ್ ಮಸ್ಕ್ ಅವರ ಸಂಪತ್ತು 4.6 ಬಿಲಿಯನ್ ಡಾಲರ್ ನಷ್ಟು ಕರಗಿದೆ. ಇದರೊಂದಿಗೆ ಅವರು ಬ್ಲೂಂಬರ್ಗ್ ಬಿಲಿಯನೇರ್ ಸೂಚ್ಯಂಕ ಶ್ರೇಯಾಂಕದಲ್ಲಿ ಅಗ್ರಸ್ಥಾನದಿಂದ ಕೆಳಗಿಳಿದಿದ್ದಾರೆ.
ಜೆಫ್ ಬೆಜೋಸ್ ನಂಬರ್ 1 ಸ್ಥಾನದಲ್ಲಿದ್ದು, ಅವರ ಆಸ್ತಿ ಮೌಲ್ಯ ಎಲಾನ್ ಮಸ್ಕ್ ಅವರಿಗಿಂತ 955 ಮಿಲಿಯನ್ ಡಾಲರ್ ಹೆಚ್ಚಾಗಿದೆ. ಜೆಫ್ ಬೆಜೊಸ್ 191.2 ಬಿಲಿಯನ್ ಡಾಲರ್ ಸಂಪತ್ತು ಹೊಂದಿದ್ದಾರೆ.