ಜಾರ್ಜ್ ಫ್ಲಾಯ್ಡ್ ಸಾವಿನ ಹಿನ್ನೆಲೆಯಲ್ಲಿ ಅಮೆರಿಕಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳು ಈಗಿನ ದೊಡ್ಡ ಸುದ್ದಿ. ಪ್ರತಿಭಟನಾಕಾರರ ಪರ ಮಾತನಾಡಿರುವ ದೊಡ್ಡ ದನಿಗಳಲ್ಲಿ ಅಮೆಜಾನ್ ಸಿಇಒ ಜೆಫ್ ಬೆಝೋಸ್ ಸಹ ಒಬ್ಬರು.
ಬೆಝೋಸ್ ಈ ನಿಲುವನ್ನು ಖಂಡಿಸಿದ ಡೇವ್ ಎಂಬ ವ್ಯಕ್ತಿಯೊಬ್ಬ ವ್ಯಕ್ತಿಯೊಬ್ಬ ಖುದ್ದು ಅವರಿಗೆ ಇ-ಮೇಲ್ ಮಾಡಿ, “Black Lives Matter ಪ್ರತಿಭಟನೆಗೆ ನಿಮ್ಮ ಬೆಂಬಲವನ್ನು ಕಂಡು ನಾನು ನಿಮ್ಮ ಕಂಪನಿಗೆ ಕೊಟ್ಟ ಆರ್ಡರ್ ಅನ್ನು ಹಿಂಪಡೆಯುತ್ತಿದ್ದೇನೆ. ನನ್ನಂತೆಯೇ ಮುಂದಿನ ದಿನಗಳಲ್ಲಿ ಇನ್ನಷ್ಟು ಜನ ಮಾಡಲಿದ್ದಾರೆ” ಎಂದು ಬರೆದಿದ್ದ.
ಇದಕ್ಕೆ ಪ್ರತಿಕ್ರಿಯಿಸಿರುವ ಬೆಝೋಸ್,”ಈ ರೀತಿಯ ದ್ವೇಷದ ವರ್ತನೆಗಳು ನಡೆದುಕೊಂಡು ಹೋಗಲು ಬಿಡಲು ಸಾಧ್ಯವಿಲ್ಲ. ಡೇವ್ ನಾನು ನಿನ್ನ ರೀತಿಯ ಗ್ರಾಹಕರನ್ನು ಕಳೆದುಕೊಳ್ಳಲು ಇಷ್ಟಪಡುವೆ” ಎಂದಿದ್ದಾರೆ.
https://www.instagram.com/p/CBEcwTgneUY/?utm_source=ig_embed