ಮುಂಬೈ: ಕೊರೊನಾ ವೈರಸ್ ಹಲವು ತಿಂಗಳಿಂದ ಅಂಗಡಿ ಮಾಲ್ ಗಳನ್ನು ಬಂದ್ ಮಾಡಿದೆ. ಶಾಪಿಂಗ್ ಪದದ ಅರ್ಥವೇ ಜನರಿಗೆ ಮರೆತು ಹೋಗುವಷ್ಟು ದಿನವಾಗಿದೆ.
ಕೆಲವೆಡೆ ಅಂಗಡಿಗಳು ತೆರೆದರೂ ಜನ ಬರುತ್ತಿಲ್ಲ. ಇದರಿಂದ ಮುಂಬೈ ವ್ಯಾಪಾರಿಯೊಬ್ಬರು ಹೊಸ ವಿಧಾನ ಕಂಡುಕೊಂಡಿದ್ದಾರೆ.
ಅಮಿತ್ ತಂದಾನಿ ಎಂಬುವವರು ಫೋಟೋವನ್ನು “ಶಾಪ್ ಆನ್ ವೀಲ್ಸ್” ಎಂಬ ಕ್ಯಾಪ್ಶನ್ ನೊಂದಿಗೆ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಫೋಟೋಕ್ಕೆ 2700 ಲೈಕ್ ಬಂದಿದ್ದು, 370 ಜನ ರೀ ಟ್ವೀಟ್ ಮಾಡಿದ್ದಾರೆ. ಮುಂಬೈನ ವಸತಿ ಸಮುಚ್ಛಯವೊಂದರ ಎದುರು ಲಾರಿಯ ಮೇಲೆ ಉತ್ತಮ ಲೈಟಿಂಗ್ ನೊಂದಿಗೆ ಜೀನ್ಸ್ ವ್ಯಾಪಾರ ಮಾಡುವ ಶೋ ರೂಂ ಇದಾಗಿದೆ.