ಸೈಬರ್ ಭದ್ರತಾ ಸಂಸ್ಥೆ ಮಾಲೀಕ 62 ವರ್ಷದ ಜೇ ಚೌಧರಿ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಜೈ ಚೌಧರಿ ಹುರುನ್ ಗ್ಲೋಬಲ್ ರಿಚ್ ಲಿಸ್ಟ್ 2021 ರಲ್ಲಿ 577 ನೇ ಸ್ಥಾನದಲ್ಲಿದ್ದಾರೆ. ಭಾರತದ ಅಗ್ರ 10 ಶತಕೋಟ್ಯಾಧಿಪತಿಗಳಲ್ಲಿ ಜೇ ಚೌಧರಿ ಒಬ್ಬರಾಗಿದ್ದಾರೆ. ಜೇ ಚೌಧರಿ ಕಂಪನಿ ಮಾರುಕಟ್ಟೆ ಮೌಲ್ಯ 28 ಅರಬ್ ಡಾಲರ್.
ಹುರುನ್ ಪಟ್ಟಿಯ ಪ್ರಕಾರ, ಅವರ ಒಟ್ಟು ಸಂಪತ್ತು ಕಳೆದ ವರ್ಷ ಶೇಕಡಾ 271 ರಷ್ಟು ಏರಿಕೆಯಾಗಿದೆ. ಕೊರೊನಾ ಕಾಲದಲ್ಲಿ ಡಿಜಿಟಲ್ ತಂತ್ರಜ್ಞಾನಕ್ಕೆ ಕಂಪನಿ ಒತ್ತು ನೀಡಿದ್ದರಿಂದ ಚೌಧರಿ ಕಂಪನಿ ಇಷ್ಟು ಸಾಧನೆ ಮಾಡಲು ಸಾಧ್ಯವಾಗಿದೆ. ಜೇ ಚೌಧರಿ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಪನೋಹ್ ಎಂಬ ಹಳ್ಳಿಯವರು. ಅವರು ಓದುವ ಸಮಯದಲ್ಲಿ ಹಳ್ಳಿಯಲ್ಲಿ ವಿದ್ಯುತ್ ಇರಲಿಲ್ಲ. ಎಷ್ಟೋ ಬಾರಿ ಅವರು ಮರದ ಕೆಳಗೆ ಕುಳಿತು ಅಧ್ಯಯನ ಮಾಡಿದ್ದರು. 10 ನೇ ತರಗತಿ ಪೂರ್ಣಗೊಳಿಸಲು ನೆರೆಯ ಹಳ್ಳಿಯಾದ ಧುಸರಾಕ್ಕೆ ಪ್ರತಿದಿನ ಸುಮಾರು 4 ಕಿ.ಮೀ. ನಡೆದು ಹೋಗುತ್ತಿದ್ದೆ ಎಂದು ಸುಮಾರು ಒಂದು ವರ್ಷದ ಹಿಂದೆ ಸಂದರ್ಶನವೊಂದರಲ್ಲಿ ಅವರು ಹೇಳಿದ್ದರು.
ವಾರಣಾಸಿಯ ಬಿಎಚ್‌ಯುನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಧ್ಯಯನ ಮಾಡಿದ ಅವರು ಸಿನ್ಸಿನಾಟಿ ವಿಶ್ವವಿದ್ಯಾಲಯದಲ್ಲಿ ಎಂಬಿಎ ಮುಗಿಸಿದರು. ನಂತ್ರ ಜೇ ಚೌಧರಿ ಅಮೆರಿಕದಲ್ಲಿ ನೆಲೆಸಿದ್ದಾರೆ. ಅವರು 2008 ರಲ್ಲಿ Zscaler ಕಂಪನಿಯನ್ನು ಪ್ರಾರಂಭಿಸಿದರು. ವಿಶ್ವದಾದ್ಯಂತ ಪ್ರಮುಖ ಟೆಕ್ ಕಂಪನಿಗಳಿಗೆ Zscaler ಸುರಕ್ಷತೆಯನ್ನು ಒದಗಿಸುತ್ತಿದೆ.