ಹೆದ್ದಾರಿಗಳಲ್ಲಿ ಕಾರುಗಳನ್ನು ಓಡಿಸಿದಂತೆಯೇ ಆಗಸದಲ್ಲಿ ಹಾರುವ ಕಾರುಗಳನ್ನು ಓಡಿಸುವ ದಶಕಗಳ ಕನಸಿಗೆ ರೆಕ್ಕೆಗಳು ಮೂಡಿದೆ. ಜಪಾನ್‌ನ ಸ್ಕೈಡ್ರೈವ್.ಇನ್ ಸಂಸ್ಥೆಯು ಈ ನಿಟ್ಟಿನಲ್ಲಿ ಯಶಸ್ವಿ ಪ್ರಯೋಗವನ್ನು ಮಾಡಿದೆ.
ಈ ಹಾರುವ ಕಾರಿನ ಒಳಗೆ ಒಬ್ಬ ವ್ಯಕ್ತಿ ಇದ್ದು, ಪ್ರೊಪೆಲ್ಲರ್‌ಗಳನ್ನು ಹೊಂದಿದ ಮೋಟರ್ ಸೈಕಲ್‌ನಂತೆ ಈ ವಾಹನ ಕಾಣುತ್ತಿದೆ. ನಿಗದಿತ ಪ್ರದೇಶದಲ್ಲಿ ನಾಲ್ಕು ನಿಮಿಷಗಳ ಅವಧಿಗೆ 1-2 ಮೀಟರ್‌ವರೆಗೂ ಈ ವಾಹನವನ್ನು ಪ್ರೊಪೆಲ್ಲರ್‌ಗಳು ಹಾರಲು ಅನುವು ಮಾಡಿಕೊಟ್ಟಿವೆ.
ಈ ಕುರಿತು ಮಾತನಾಡಿದ ಸ್ಕೈಡ್ರೈವ್‌ನ ಪ್ರಾಜೆಕ್ಟ್ ಮ್ಯಾನೇಜರ್ ಟೋಮೋಹಿರೋ ಫುಕುಝಾವಾ, 2023ರ ವೇಳೆಗೆ ಈ ಹಾರುವ ಕಾರುಗಳು ವಾಸ್ತವವಾಗಲಿವೆ ಎಂದಿದ್ದಾರೆ.
ಜಗತ್ತಿನಾದ್ಯಂತ 100ಕ್ಕೂ ಹೆಚ್ಚು ಫ್ಲೈಯಿಂಗ್ ಕಾರಿನ ಪ್ರಾಜೆಕ್ಟ್‌ಗಳು ಚಾಲ್ತಿಯಲ್ಲಿದ್ದು, ಬೆರಳೆಣಿಕೆಯಷ್ಟೇ ಹೇಳಿಕೊಳ್ಳುವ ಮಟ್ಟದ ಪ್ರಗತಿ ಸಾಧಿಸಿವೆ.