ಜನ್ ಧನ್ ಖಾತೆದಾರರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಖಾತೆಗೆ ಆಧಾರ್ ಜೋಡಣೆ ಮಾಡದಿದ್ದರೆ 1.3 ಲಕ್ಷ ರೂಪಾಯಿ ಮೊತ್ತದ ವಿಮೆ ಸೌಲಭ್ಯದಿಂದ ವಂಚಿತರಾಗಬೇಕಾಗುತ್ತದೆ ಎಂದು ಹೇಳಲಾಗಿದೆ.
ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಫಲಾನುಭವಿಗಳಿಗೆ ರುಪೇ ಡೆಬಿಟ್ ಕಾರ್ಡ್ ನೀಡಲಾಗುವುದು. ಇದರಲ್ಲಿ ಒಂದು ಲಕ್ಷ ರೂಪಾಯಿವರೆಗೆ ಅಪಘಾತ ವಿಮೆ ಸೌಲಭ್ಯವಿರುತ್ತದೆ. ಆಧಾರ್ ಕಾರ್ಡ್ ನೊಂದಿಗೆ ಖಾತೆಯನ್ನು ಜೋಡಣೆ ಮಾಡದಿದ್ದರೆ ಈ ಸೌಲಭ್ಯ ಸಿಗುವುದಿಲ್ಲ.
ಇನ್ನು ಜನ್ ಧನ್ ಖಾತೆದಾರರಿಗೆ 30 ಸಾವಿರ ರೂಪಾಯಿಯವರೆಗೆ ಆಕ್ಸಿಡೆಂಟಲ್ ಡೆತ್ ಇನ್ಶೂರೆನ್ಸ್ ಸೌಲಭ್ಯವಿರುತ್ತದೆ. ಈ ಸೌಲಭ್ಯ ಪಡೆಯಲು ಖಾತೆಗೆ ಆಧಾರ್ ಕಾರ್ಡ್ ಜೋಡಣೆಯಾಗಿರಬೇಕು.
ಇನ್ನು ಜನ್ ಧನ್ ಖಾತೆದಾರರಿಗಾಗಿ 5 ಸಾವಿರ ರೂ. ಓಡಿ ಸೌಲಭ್ಯ ಪಡೆಯಲು ಆಧಾರ್ ಕಾರ್ಡ್ ಜೋಡಣೆ ಮಾಡಬೇಕಿದೆ. ಬ್ಯಾಂಕಿಗೆ ಹೋಗಿ ಖಾತೆಗೆ ಆಧಾರ್ ಲಿಂಕ್ ಮಾಡಿಸಬಹುದು. ಮೊಬೈಲ್ ಮೆಸೇಜ್ ಮೂಲಕ ಆಧಾರ್ ನಂಬರ್ ಅನ್ನು ಖಾತೆಗೆ ಲಿಂಕ್ ಮಾಡಬಹುದಾಗಿದೆ. ನೊಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸಿ ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಸಂಖ್ಯೆಯನ್ನು ಟೈಪ್ ಮಾಡಿ 567676 ಕ್ಕೆ ಕಳುಹಿಸಲು ಎಸ್ಬಿಐ ಅವಕಾಶ ಕಲ್ಪಿಸಿದೆ.