ನವದೆಹಲಿ: ಪ್ರಧಾನ ಮಂತ್ರಿ ಜನ್ ಧನ್ ಖಾತೆಗಳನ್ನು ಹೊಂದಿದದವರಲ್ಲಿ ಶೇಕಡ 55 ರಷ್ಟು ಮಹಿಳೆಯರಿದ್ದಾರೆ.
ಸೆಪ್ಟಂಬರ್ 9 ರವರೆಗೆ ಜನ್ ಧನ್ ಯೋಜನೆಯಡಿ 40.63 ಕೋಟಿ ಖಾತೆ ತೆರೆಯಲಾಗಿದ್ದು 22.44 ಕೋಟಿ ಖಾತೆಗಳನ್ನು ಮಹಿಳೆಯರು ಹೊಂದಿದ್ದಾರೆ. 18.19 ಕೋಟೆ ಖಾತೆಗಳು ಪುರುಷರ ಹೆಸರಲ್ಲಿವೆ.
ಚಂದ್ರಶೇಖರ ಗೌರ್ ಎಂಬುವರು ಸಲ್ಲಿಸಿದ್ದ ಮಾಹಿತಿ ಹಕ್ಕು ಕಾಯ್ದೆ ಅರ್ಜಿಗೆ ಜನ್ ಧನ್ ಖಾತೆ ಕುರಿತಾದ ಮಾಹಿತಿ ನೀಡಲಾಗಿದೆ. ಪುರುಷರ ಖಾತೆಯಲ್ಲಿರುವ ಹಣವೆಷ್ಟು? ಮಹಿಳೆಯರ ಖಾತೆಯಲ್ಲಿ ಎಷ್ಟು ಹಣವಿದೆ? ಎನ್ನುವ ಮಾಹಿತಿಯನ್ನು ನೀಡಿಲ್ಲ. ಸೆಪ್ಟಂಬರ್ ಮೊದಲ ವಾರದವರೆಗೂ ಶೇಕಡ 8.5 ರಷ್ಟು ಠೇವಣಿ ಮೊತ್ತ ಹೆಚ್ಚಳವಾಗಿದೆ. 3.01 ಕೋಟಿ ಖಾತೆಗಳಲ್ಲಿ ಹಣ ಇಲ್ಲವೆಂದು ಮಾಹಿತಿ ನೀಡಲಾಗಿದೆ.