ನವದೆಹಲಿ: 2022 -23ನೇ ಸಾಲಿನ ಆದಾಯ ತೆರಿಗೆ ವಿವರ ಸಲ್ಲಿಕೆಗೆ ಚಾಲನೆ ನೀಡಲಾಗಿದೆ. ಫಾರ್ಮ್ 1 ಮತ್ತು ಫಾರ್ಮ್ 4 ರ ಮೂಲಕ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡುವವರಿಗೆ ತೆರಿಗೆ ಇಲಾಖೆ ವೆಬ್ಸೈಟ್ ಮುಕ್ತವಾಗಿದೆ.
ವೈಯಕ್ತಿಕ ತೆರಿಗೆದಾರರು, ವೃತ್ತಿಪರರು, ಸಣ್ಣ ಉದ್ಯಮಿಗಳು ಇ- ಫೈಲಿಂಗ್ ಪೋರ್ಟಲ್ ಬಳಸಿಕೊಂಡು ಆನ್ಲೈನ್ ಮೂಲಕ ತೆರಿಗೆ ವಿವರ ಸಲ್ಲಿಸಬಹುದು. ಆದಾಯ ತೆರಿಗೆ ಇಲಾಖೆ ಈ ಕುರಿತು ಮಾಹಿತಿ ನೀಡಿದ್ದು, ಮೊದಲ ಹಂತದಲ್ಲಿ ಐಟಿಆರ್ 1 ಮತ್ತು 4 ಫಾರ್ಮ್ ಬಿಡುಗಡೆ ಮಾಡಲಾಗಿದೆ. ಶೀಘ್ರವೇ ಉಳಿದ ಐಟಿಆರ್ ಗಳಿಗೂ ಪೋರ್ಟಲ್ ಮುಕ್ತಗೊಳಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ತೆರಿಗೆದಾರರು ಮಾಹಿತಿ ತುಂಬಿ ಅರ್ಜಿ ಸಲ್ಲಿಕೆಗೆ ಜುಲೈ 31 ಕೊನೆಯ ದಿನವಾಗಿದೆ. ಐಟಿಆರ್ 1ರ ಮೂಲಕ ವೇತನ ವರ್ಗ, ಹಿರಿಯ ನಾಗರಿಕರು ಸೇರಿದಂತೆ ವೈಯಕ್ತಿಕ ತೆರಿಗೆದಾರರು ಮಾಹಿತಿ ಸಲ್ಲಿಸಬಹುದಾಗಿದೆ. ಉದ್ಯಮಿಗಳು, ವೃತ್ತಿಪರರು ಮತ್ತು ವಾರ್ಷಿಕ 50 ಲಕ್ಷ ರೂ.ಗಿಂತ ಹೆಚ್ಚಿನ ಆದಾಯದ ವೈಯಕ್ತಿಕ ತೆರಿಗೆದಾರರು ಐಟಿಆರ್ ಸಲ್ಲಿಸಬಹುದಾಗಿದೆ.