ನವದೆಹಲಿ: ಹಣಕಾಸು ಸಚಿವಾಲಯ ಐಟಿಆರ್ ಫೈಲಿಂಗ್ ಗಡುವನ್ನು ನವೆಂಬರ್ 7 ರವರೆಗೆ ವಿಸ್ತರಿಸಿದೆ. ಈ ಮೂಲಕ ತೆರಿಗೆ ಪಾವತಿದಾರರಿಗೆ ಸಡಿಲಿಕೆ ನೀಡಲಾಗಿದೆ.
ಈ ಮೂಲಕ ಹಣಕಾಸು ಸಚಿವಾಲಯವು 2022-23ರ ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಗಡುವನ್ನು ನವೆಂಬರ್ 7, 2022 ರವರೆಗೆ ವಿಸ್ತರಿಸಿದೆ. ಬುಧವಾರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. FY23 ಗಾಗಿ ITR ಅನ್ನು ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನಾಂಕ ಆಗಿತ್ತು.
ಕಳೆದ ತಿಂಗಳು ಆಡಿಟ್ ವರದಿಗಳನ್ನು ಸಲ್ಲಿಸುವ ಗಡುವನ್ನು ವಿಸ್ತರಿಸಿದ್ದರಿಂದ ಐಟಿಆರ್ ಫೈಲಿಂಗ್ ಗಡುವು ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ(ಸಿಬಿಡಿಟಿ) ಅಧಿಸೂಚನೆಯಲ್ಲಿ ತಿಳಿಸಿದೆ.
ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ನಲ್ಲಿ ಸ್ವೀಕೃತಿ ಸಂಖ್ಯೆಯೊಂದಿಗೆ ಆನ್ ಲೈನ್‌ನಲ್ಲಿ ITR ಮರುಪಾವತಿ ಸ್ಥಿತಿ ಪರಿಶೀಲಿಸುವ ಬಗ್ಗೆ ಇಲ್ಲಿದೆ ಮಾಹಿತಿ
https://eportal.incometax.gov.in/iec/foservices/#/login ಈ ಲಿಂಕ್ ಬಳಸಿ ಲಾಗ್ ಇನ್ ಮಾಡಿ
ನಿಮ್ಮ ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗ್ ಇನ್ ಮಾಡಿ.
‘ನನ್ನ ಖಾತೆ’ ಗೆ ನ್ಯಾವಿಗೇಟ್ ಮಾಡಿ ಮತ್ತು ‘ಮರುಪಾವತಿ/ಬೇಡಿಕೆ ಸ್ಥಿತಿ’ ಆಯ್ಕೆಮಾಡಿ.
ಡ್ರಾಪ್-ಡೌನ್ ಮೆನುವಿನಿಂದ ‘ಆದಾಯ ತೆರಿಗೆ ರಿಟರ್ನ್ಸ್’ ಆಯ್ಕೆಮಾಡಿ, ನಂತರ ‘ಸಲ್ಲಿಸು’ ಬಟನ್ ಕ್ಲಿಕ್ ಮಾಡಿ.
ನಿಮ್ಮ ಸ್ವೀಕೃತಿ ಸಂಖ್ಯೆಯನ್ನು ಆಯ್ಕೆಮಾಡಿ;