ನವದೆಹಲಿ: ಮಾಹಿತಿ ತಂತ್ರಜ್ಞಾನ ಕ್ಷೇತ್ರ ನೇಮಕಾತಿಯಲ್ಲಿ ಶೇಕಡ 6ರಷ್ಟು ಹೆಚ್ಚಳ ಆಗಿದೆ. ಕೆಲವು ತಿಂಗಳಿನಿಂದ ಹೊಸ ನೇಮಕಾತಿ ಮಂಕಾಗಿತ್ತು. ಇದೀಗ ಪುನಃ ಚೇತರಿಕೆ ಕಂಡು ಬಂದಿದೆ. ಬೇಡಿಕೆ ತಗ್ಗಿದ ಕಾರಣ ಅನೇಕ ಐಟಿ ಕಂಪನಿಗಳು ನೇಮಕಾತಿ ಸ್ಥಗಿತಗೊಳಿಸಿದ್ದವು. ಈಗ ಹಲವಾರು ಕಂಪನಿಗಳು ನೇಮಕಾತಿಗಳನ್ನು ಪುನಾರಾರಂಭಿಸಿವೆ.
ಒಟ್ಟಾರೆ ನೇಮಕಾತಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇಕಡ 5-6 ರಷ್ಟು ಹೆಚ್ಚಳ ಆಗಿದೆ. ಹಿಂದಿನ ಎರಡು ತ್ರೈಮಾಸಿಕಗಳಿಗೆ ಹೋಲಿಸಿದಾಗ ಈ ತ್ರೈಮಾಸಿಕದಲ್ಲಿ ಐಟಿ ಕಂಪನಿಗಳಿಂದ ನೇಮಕಾತಿ ಹೆಚ್ಚಳವಾಗಿದೆ. ಉದ್ಯೋಗಿಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಹೇಳಲಾಗಿದೆ.