ಐಟಿ ಕಂಪನಿಗಳ ನೇಮಕಾತಿಯಲ್ಲಿ ಭಾರೀ ಕುಸಿತ ಉಂಟಾಗಿದೆ. 2022 -23ನೇ ಸಾಲಿನಲ್ಲಿ ದೇಶದ ಪ್ರಮುಖ 5 ಐಟಿ ಕಂಪನಿಗಳು 84,000 ಕ್ಕಿಂತ ಕಡಿಮೆ ನೇಮಕಾತಿ ಮಾಡಿಕೊಂಡಿವೆ.
2021 -22 ನೇ ಸಾಲಿನಲ್ಲಿ ಸುಮಾರು 2.70 ಲಕ್ಷ ನೂತನ ಉದ್ಯೋಗಿಗಳ ನೇಮಕಾತಿಗೆ ಹೋಲಿಕೆ ಮಾಡಿದರೆ ಇದು ಬಾರಿ ಕುಸಿತವಾಗಿದೆ.
ಕಳೆದ ವರ್ಷಕ್ಕಿಂತ 2022 -23ನೇ ಸಾಲಿನ ನೇಮಕಾತಿಯಲ್ಲಿ ಶೇಕಡ 69 ರಷ್ಟು ಉದ್ಯೋಗ ಕಡಿತ ಆಗಿದೆ. ಜಾಗತಿಕ ಗ್ರಾಹಕರು ಐಟಿ ಹೂಡಿಕೆಗಳಲ್ಲಿ ಕಡಿತ ಮಾಡುತ್ತಿರುವುದು ಮತ್ತು ಕೆಲವು ಪ್ರಾಜೆಕ್ಟ್ ಗಳನ್ನು ರದ್ದು ಮಾಡಿರುವುದು ಟೆಕ್ಕಿಗಳ ನೇಮಕಾತಿ ಹಿನ್ನೆಡೆಗೆ ಪ್ರಮುಖ ಕಾರಣವಾಗಿದ್ದು, ಐಟಿ ಕಂಪನಿಗಳಲ್ಲಿ ಉದ್ಯೋಗ ಭಾರಿ ಕಡಿತವಾಗಿದೆ.