ಕೊರೊನಾ ವೈರಸ್ ಕಾರಣ ವಿಶ್ವದಾದ್ಯಂತ ಅನೇಕ ಕಂಪನಿಗಳು ವರ್ಕ್ ಫ್ರಂ ಹೋಮ್ ಗೆ ಅವಕಾಶ ನೀಡಿವೆ. ಗೂಗಲ್ ಮತ್ತು ಫೇಸ್ಬುಕ್ ಸೇರಿದಂತೆ ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮುಂದಿನ ವರ್ಷ ಜೂನ್‌ವರೆಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡಿವೆ. ಅದೇ ಸಮಯದಲ್ಲಿ ಭಾರತದ ಕಂಪನಿ ಆರ್‌ಪಿಜಿ ಎಂಟರ್‌ಪ್ರೈಸಸ್ ಮಹತ್ವದ ಘೋಷಣೆ ಮಾಡಿದೆ.
ಕಂಪನಿಯು ತನ್ನ ಸೇಲ್ಸ್ ನೌಕರರಿಗೆ ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡಲು ಅನುಮತಿ ನೀಡಿದೆ. ಇಂಥ ನಿರ್ಧಾರ ಕೈಗೊಂಡ ಭಾರತದ ಮೊದಲ ಕಂಪನಿಯಾಗಿದೆ ಆರ್‌ಪಿಜಿ ಎಂಟರ್‌ಪ್ರೈಸಸ್ .
ಈ ಕಂಪನಿಯ ಶೇಕಡಾ 75ರಷ್ಟು ಉದ್ಯೋಗಿಗಳು ಮನೆಯಿಂದ ಕೆಲಸ ಮಾಡಲಿದ್ದಾರೆ. ಆರ್‌ಪಿಜಿ ಎಂಟರ್‌ಪ್ರೈಸಸ್ ಟೈರ್, ಐಟಿ, ಹೆಲ್ತ್, ಎನರ್ಜಿ, ಇನ್ಫ್ರಾಸ್ಟ್ರಕ್ಚರ್ ಮತ್ತು ಪ್ಲಾಂಟೇಶನ್ ಕ್ಷೇತ್ರಗಳಲ್ಲಿ ವ್ಯವಹರಿಸುತ್ತದೆ.
ಕಚೇರಿಗೆ ಬರುವ ಉದ್ಯೋಗಿಗಳು ತಿಂಗಳಲ್ಲಿ ಎರಡು ವಾರ ಮನೆಯಿಂದಲೇ ಕೆಲಸ ಮಾಡಬಹುದು. ವಿಶೇಷ ಸಂದರ್ಭದಲ್ಲಿ 3 ವಾರ ಮನೆಯಿಂದಲೇ ಕೆಲಸ ಮಾಡಬಹುದು. ಸೆಪ್ಟೆಂಬರ್ 1ರಿಂದ ಹೊಸ ನೀತಿ ಜಾರಿಗೆ ಬರಲಿದೆ.