
ನವದೆಹಲಿ: ಐಟಿ ಕಂಪನಿಗಳು ವರ್ಷ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಹೊಸಬರಿಗೆ ಉದ್ಯೋಗವಕಾಶ ಕಲ್ಪಿಸಲಿವೆ. ಕೋವಿಡ್ ಬಿಕ್ಕಟ್ಟಿನ ನಂತರ ಕಂಪನಿಗಳಿಂದ ತಂತ್ರಜ್ಞಾನ ಬಳಕೆ ಹೆಚ್ಚಳವಾಗಿದೆ. ವರ್ಕ್ ಫ್ರಮ್ ಹೋಮ್ ಹೆಚ್ಚಳದ ಪರಿಣಾಮ ಸಾಫ್ಟ್ ವೇರ್ ಗೆ ಬೇಡಿಕೆ ಬಂದಿದೆ. ಇವೇ ಮೊದಲಾದ ಕಾರಣದಿಂದ ನೇಮಕಾತಿ ಮಾಡಿಕೊಳ್ಳಲಾಗುವುದು ಎನ್ನಲಾಗಿದೆ.
ಭಾರತದ ದಿಗ್ಗಜ ಐಟಿ ಕಂಪನಿಯಾದ ಟಿಸಿಎಸ್ 40,000 ಹೊಸಬರನ್ನು ನೇಮಕ ಮಾಡಿಕೊಳ್ಳಲಿದೆ. ಇನ್ಫೋಸಿಸ್ 26000, ಹೆಚ್.ಸಿ.ಎಲ್. 12000, ವಿಪ್ರೋ 9000 ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.