
ನವದೆಹಲಿ: ಸವರಿನ್ ಗೋಲ್ಡ್ ಬಾಂಡ್ ಯೋಜನೆ ಆರನೇ ಹಂತದ ವಿತರಣೆ ಬೆಲೆಯನ್ನು ಪ್ರತಿ ಗ್ರಾಂಗೆ 5117 ರೂಪಾಯಿ ನಿಗದಿಮಾಡಲಾಗಿದೆ.
2020 -21ನೇ ಸರಣಿ ಆರರ ವಿತರಣೆ ಕಾರ್ಯ ಆಗಸ್ಟ್ 31 ರಿಂದ ಸೆಪ್ಟೆಂಬರ್ 4 ರವರೆಗೆ ನಡೆಯಲಿದೆ. ಸೆಪ್ಟೆಂಬರ್ 8 ರಂದು ಇತ್ಯರ್ಥ ದಿನಾಂಕ ನಿಗದಿ ಮಾಡಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ನೊಂದಿಗೆ ಭಾರತ ಸರ್ಕಾರ ಸಮಾಲೋಚನೆ ನಡೆಸಿದ್ದು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಮತ್ತು ಹಣ ಪಾವತಿಸುವ ಹೂಡಿಕೆದಾರರಿಗೆ ವಿತರಣೆಯಲ್ಲಿ ಪ್ರತಿ ಗ್ರಾಂಗೆ 50 ರೂಪಾಯಿ ರಿಯಾಯಿತಿ ನೀಡಲಾಗುವುದು.
ಬಾಂಡ್ ವಿತರಣೆ ಹಿಂದಿನ ಸರಾಸರಿ ಮೂರು ವ್ಯವಹಾರ ದಿನಗಳ ಆಧರಿಸಿ 999 ಶುದ್ಧತೆಯ ಚಿನ್ನಕ್ಕೆ 1 ಗ್ರಾಂಗೆ 5117 ರೂಪಾಯಿ ನಿಗದಿ ಮಾಡಲಾಗಿದೆ.