ಕೊರೊನಾ ವಿರುದ್ಧ ಹೋರಾಡಲು ಸಂಶೋಧಕರು ವಿವಿಧ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಇದೀಗ ಇಸ್ರೇಲಿ ಸಂಶೋಧಕರು ಕೋವಿಡ್ 19 ವೈರಸ್ ಗಳನ್ನು ಕೊಲ್ಲಬಲ್ಲ ಮಾಸ್ಕ್ ಆವಿಷ್ಕರಿಸಿದ್ದಾರೆ.
ಸ್ವಯಂಚಾಲಿತವಾಗಿ ಸ್ವಚ್ಛಗೊಳಿಸುವ ಮತ್ತು ಆ ಮೂಲಕ ವೈರಸ್ ಕೊಲ್ಲುವಂತಹ ಮಾಸ್ಕ್ ಸಿದ್ಧಪಡಿಸಲಾಗಿದೆ. ಇದು ಫೋನ್ ಚಾರ್ಜರ್ ನಿಂದ ಶಾಖವನ್ನು ಉತ್ಪಾದಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಸಂಶೋಧಕರು ಹೇಳುತ್ತಾರೆ. ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತೋರಿಸಲು ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಮೊಬೈಲ್ ಚಾರ್ಜ್ ಮಾಡುವ ರೀತಿಯೇ ಮಾಸ್ಕನ್ನು ಚಾರ್ಜ್ ಮಾಡಿದಾಗ ಅದು ಒಂದು ಸಮಪ್ರಮಾಣದಲ್ಲಿ ಶಾಖ ಉತ್ಪಾದಿಸುತ್ತದೆ, ಈ ವೇಳೆ ಮಾಸ್ಕ್ ನ ಇನ್ನರ್ ಲೇಯರ್ ನಲ್ಲಿರುವ ಕಾರ್ಬನ್ ಫೈಬರ್ 70 ಡಿಗ್ರಿವರೆಗೆ ಬಿಸಿಯಾಗುತ್ತದೆ. ಇದರಿಂದ ವೈರಸ್ ನಾಶವಾಗುತ್ತದೆ ಎಂದು ವಿವರಿಸಲಾಗಿದೆ.
ಅಲ್ಲಿನ ವಿಶ್ವವಿದ್ಯಾನಿಲಯದ ಸಂಶೋಧಕರ ತಂಡ ಇದನ್ನು ಅಭಿವೃದ್ಧಿಪಡಿಸಿದ್ದು, ಪೇಟೆಂಟ್ ಗಾಗಿ ಅರ್ಜಿ ಹಾಕಿದ್ದಾರೆ. ಪೇಟೆಂಟ್ ದೊರೆತ ನಂತರ ಇದನ್ನು ವಾಣಿಜ್ಯಾತ್ಮಕವಾಗಿ ಮಾರಾಟ ಮಾಡಲು ಉದ್ದೇಶಿಸಿದ್ದಾರೆ.
ಭಾರತದಲ್ಲಿ ಇದು ಮಾರಾಟವಾದರೆ ಸರಿ ಸುಮಾರು 76 ರೂಪಾಯಿಗೆ ಲಭ್ಯವಾಗಲಿದೆ. ಎನ್ 95 ಮಾಸ್ಕ್ ರೀತಿಯಲ್ಲೇ ಕಾಣಿಸುತ್ತಿದ್ದು, ಮುಂಭಾಗದಲ್ಲಿ ವಾಲ್ವ್ ಹೊಂದಿದೆ.
https://www.youtube.com/watch?v=QJmKse1fhrg