ಭಾರತ – ಚೀನಾ ಗಡಿಯಲ್ಲಿನ ಉದ್ವಿಗ್ನ ಸ್ಥಿತಿ ಬಳಿಕ ಚೀನಾ ವಿರುದ್ಧದ ಡಿಜಿಟಲ್ ಹೋರಾಟಕ್ಕೆ ಮುನ್ನುಡಿ ಹಾಡಿರುವ ಮೋದಿ ಸರಕಾರ 59 ಮೊಬೈಲ್ ಆಪ್ ಅನ್ನು ನಿಷೇಧಿಸಿತ್ತು. ಟಿಕ್ ಟಾಕ್, ಯುಸಿ ಬ್ರೌಸರ್, ಹಲೋ ಸೇರಿದಂತೆ ಪ್ರಮುಖ ಆಪ್‌ಗಳನ್ನು ಬಂದ್ ಮಾಡಿದ್ದರೂ, ಝೂಮ್ ಆಪ್ ನ್ನು ಮಾತ್ರ ನಿಷೇಧಿಸಿಲ್ಲ.
ಝೂಮ್ ಆಪ್ ನಿಷೇಧಿಸದಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೇಂದ್ರ ಸರಕಾರ ಈ ರೀತಿಯ ಕ್ರಮ ಕೈಗೊಳ್ಳಲು ಕಾರಣವೇನು ಎನ್ನುವುದನ್ನು ನೋಡಿದರೆ, ಝೂಮ್ ಮೂಲತಃ ಚೀನಾದ ಆಪ್ ಅಲ್ಲ ಎನ್ನುವ ಸತ್ಯ ಬಹಿರಂಗಗೊಂಡಿದೆ.
ಹೌದು, ಝೂಮ್ ಆ್ಯಪ್ ಅನ್ನು ಅಭಿವೃದ್ಧಿಪಡಿಸಿರುವುದು ಅಮೆರಿಕ ಮೂಲದ ಸಂಸ್ಥೆ. ಆದರೆ ಚೀನಾ – ಅಮೆರಿಕದ ಮೂಲದ ಎರಿಕ್ ಯೂಯಾನ್ ಝೂಮ್ ಸಂಸ್ಥೆಯ ಮಾಲೀಕರು. ಕೋಟ್ಯಧಿಪತಿಯಾಗಿರುವ ಆವರು, ಅಮೆರಿಕ ನಾಗರಿಕತ್ವವನ್ನು ಪಡೆದಿಕೊಂಡಿದ್ದಾರೆ. ಆದ್ದರಿಂದ ಝೂಮ್ ನ್ನು ಚೀನಾದ ಆಪ್ ಎನ್ನಲು ಸಾಧ್ಯವಿಲ್ಲ. ಅದೇ ಕಾರಣಕ್ಕೆ ಅದನ್ನು ಬ್ಯಾನ್ ಮಾಡಿಲ್ಲ ಎನ್ನಲಾಗಿದೆ.
ಕೊರೋನಾ ಲಾಕ್‌ಡೌನ್ ಅವಧಿಯಲ್ಲಿ ನಡೆಯುತ್ತಿದ್ದ ಹಲವು ವಿಡಿಯೊ ಕಾನ್ಫರೆನ್ಸ್‌ಗೆ ಅನೇಕರು ಝೂಮ್ ಅನ್ನು ಬಳಸುತ್ತಿದ್ದರು. ಆದರೆ ಕೇಂದ್ರ ಸರಕಾರ ಝೂಮ್ ಚೀನಾ ಮೂಲದ ಕಂಪನಿಯಾಗಿದ್ದು, ಮಾಹಿತಿ ಸೋರಿಕೆಯಾಗುವ ಸಾಧ್ಯತೆಯಿದೆ ಎನ್ನುವ ಮಾತನ್ನು ಹೇಳಿತ್ತು. ಆದ್ದರಿಂದ ಝೂಮ್ ಚೀನಾ ಮೂಲದ ಸಂಸ್ಥೆ ಎಂದೇ ತಿಳಿಯಲಾಗಿತ್ತು. ಆದರೆ ಚೀನಾ ಮೂಲದ ಅಮೆರಿಕನ್ ವ್ಯಕ್ತಿ ಇದನ್ನು ಆರಂಭಿಸಿದ್ದು ಎನ್ನುವುದು ಈಗ ತಿಳಿದುಬಂದಿದೆ.
https://twitter.com/SubtleSass/status/1277635756245151745?ref_src=twsrc%5Etfw%7Ctwcamp%5Etweetembed%7Ctwterm%5E1277635756245151745%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fis-zoom-a-chinese-app-heres-why-govt-didnt-ban-the-video-conferencing-platform-2693891.html