ನವದೆಹಲಿ: ಆರೋಗ್ಯ ಮತ್ತು ಜೀವ ವಿಮೆ ಜಿಎಸ್ಟಿ ಕಡಿತಗೊಳಿಸುವಂತೆ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಮತ್ತೆ ಹಣಕಾಸು ಸಚಿವಾಲಯಕ್ಕೆ ಮನವಿ ಮಾಡಿದೆ.
ಹಣಕಾಸು ಸಚಿವಾಲಯ ಅನುಮೋದನೆ ನೀಡಿದರೆ ಜಿಎಸ್ಟಿ ದರ ಕಡಿಮೆಯಾಗಿ ವಿಮೆ ಯೋಜನೆಗಳ ಪ್ರೀಮಿಯಂ ಇಳಿಕೆ ಮಾಡಬಹುದು. ಸೆಪ್ಟೆಂಬರ್ 19 ರಂದು ಜಿಎಸ್ಟಿ ಕೌನ್ಸಿಲ್ ಸಭೆ ನಡೆಯಲಿದ್ದು, ಎಲ್ಲರ ಚಿತ್ತ ಸಭೆಯತ್ತ ನೆಟ್ಟಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಎಲ್ಲಾ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಹಣಕಾಸು ಸಚಿವಾಲಯಕ್ಕೆ ಮತ್ತೊಮ್ಮೆ ಮನವಿ ಮಾಡಿ ಜೀವ ಮತ್ತು ಆರೋಗ್ಯದ ಮೇಲಿನ ಜಿಎಸ್ಟಿ ಕಡಿತಗೊಳಿಸುವಂತೆ ಕೋರಿದೆ. ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವಿಮೆ ಅವಶ್ಯಕವಾಗಿದ್ದು ಅದರ ಉಪಯುಕ್ತತೆಯನ್ನು ಗಮನಿಸಿ ಜಿಎಸ್ಟಿ ದರ ಕಡಿಮೆಗೊಳಿಸುವಂತೆ ಕೋರಲಾಗಿದೆ. ವಿಮೆ ಮೇಲಿನ ಜಿಎಸ್ಟಿಯನ್ನು ಶೇಕಡ 18 ರಿಂದ ಶೇಕಡ 5 ಕ್ಕೆ ಇಳಿಸುವಂತೆ ಪ್ರಾಧಿಕಾರ ಹಣಕಾಸು ಸಚಿವಾಲಯಕ್ಕೆ ಮನವಿ ಮಾಡಿದೆ.