ಜನವರಿ 1 ರಿಂದ ಕಡ್ಡಾಯವಾಗಿ ಸ್ಟ್ಯಾಂಡರ್ಡ್ ಜೀವವಿಮೆ ಉತ್ಪನ್ನ ಸರಳ್ ಜೀವನ್ ಬಿಮಾ ಜಾರಿಗೊಳಿಸುವಂತೆ ಎಲ್ಲಾ ವಿಮಾ ಸಂಸ್ಥೆಗಳಿಗೆ ವಿಮೆ ನಿಯಂತ್ರಕ IRDAI ಸೂಚನೆ ನೀಡಿದೆ.
ಮಾರುಕಟ್ಟೆಯಲ್ಲಿ ಅನೇಕ ಅವಧಿ ಇನ್ಸೂರೆನ್ಸ್ ಉತ್ಪನ್ನಗಳಿವೆ. ಹೀಗಾಗಿ ಸರಿಯಾಗಿರುವುದನ್ನು ಆಯ್ಕೆಮಾಡಿಕೊಳ್ಳುವುದು ಕಷ್ಟಸಾಧ್ಯವಾಗುತ್ತದೆ. ಈ ಕಾರಣದಿಂದ ಸ್ಟಾಂಡರ್ಡ್ ಆಗಿರುವ ಒಂದು ಅವಧಿ ವಿಮೆ ಅಗತ್ಯವಾಗಿದೆ.
ಎಲ್ಲ ಜೀವ ವಿಮಾ ಸಂಸ್ಥೆಗಳು 2021 ರ ಜನವರಿಯಿಂದ ಕಡ್ಡಾಯವಾಗಿ ಸ್ಟ್ಯಾಂಡರ್ಡ್ ಜೀವವಿಮೆ ಉತ್ಪನ್ನ ಸರಳ್ ಜೀವನ್ ಬಿಮಾ ಯೋಜನೆ ಜಾರಿಗೊಳಿಸಬೇಕೆಂದು ಹೇಳಲಾಗಿದೆ. ಜೀವವಿಮೆ ಉತ್ಪನ್ನವಾಗಿರುವ ಸರಳ್ ಜೀವನ್ ಬಿಮಾ ಪಾಲಿಸಿದಾರರಿಗೆ ಪಾಲಿಸಿ ಅವಧಿಯಲ್ಲಿ ಸಾವು ಸಂಭವಿಸಿದಾಗ ನಾಮಿನಿದಾರರಿಗೆ ನಿರ್ದಿಷ್ಟ ಮೊತ್ತದ ವಿಮೆ ಮೊತ್ತ ಭರಿಸುತ್ತದೆ.
ಆತ್ಮಹತ್ಯೆಗೆ ವಿಮೆ ಪರಿಹಾರ ಇರುವುದಿಲ್ಲ. ಪಾಲಿಸಿ ಅವಧಿ 5 ರಿಂದ 40 ವರ್ಷವಾಗಿದ್ದು 5 ಲಕ್ಷ ರೂಪಾಯಿಯಿಂದ 25 ಲಕ್ಷ ರೂಪಾಯಿಯವರೆಗೆ ವಿಮೆ ಪರಿಹಾರದ ಕವರೇಜ್ ಇರುತ್ತದೆ ಎಂದು IRDAI ಮಾರ್ಗದರ್ಶಿ ಬಿಡುಗಡೆ ಮಾಡಿದೆ ಎಂದು ಹೇಳಲಾಗಿದೆ