ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಕೋವಿಡ್ ಗೆ ಸಂಬಂಧ ಪಟ್ಟಂತೆ ನಿರ್ದಿಷ್ಟ ಯೋಜನೆಯನ್ನು ಜುಲೈ ಹತ್ತರೊಳಗೆ ಪ್ರಕಟಿಸಲು ವಿಮಾ ಕಂಪೆನಿಗಳಿಗೆ ಸೂಚಿಸಿದೆ.
ಕೊರೊನಾ ಸಾಂಕ್ರಾಮಿಕ ಹರಡುತ್ತಿರುವ ಹಿನ್ನೆಲೆಯಲ್ಲಿ ಜನರಿಗೆ ಅನುಕೂಲವಾಗಬೇಕು ಎಂಬ ನಿಟ್ಟಿನಲ್ಲಿ ಯೋಜನೆ ಬರಬೇಕೆಂಬುದು ಪ್ರಾಧಿಕಾರದ ಆಶಯ. ಈ ಹಿನ್ನೆಲೆಯಲ್ಲಿ ಮಾರ್ಗಸೂಚಿಯನ್ನೂ ಪ್ರಕಟಿಸಿದೆ.
ಜೀವ ವಿಮೆ ಮತ್ತು ಸಾಮಾನ್ಯ ವಿಮೆ ಹಾಗೂ ಆರೋಗ್ಯ ವಿಮೆ ನೀಡುವ ಕಂಪೆನಿಗಳು ಕೊರೊನಾ ಸಂದರ್ಭದಲ್ಲಿ ಜನರಿಗೆ ಉಪಯೋಗುವಾಗುವ ವಿಮೆ ಯೋಜನೆ ತರಬೇಕೆಂದು ಹೇಳಲಾಗಿದೆ.
ಕೊರೊನಾ ರಕ್ಷಕ್ ಮತ್ತು ಕೊರೊನಾ ಕವಚ್ ಎಂಬ ಎರಡು ಮಾದರಿಗಳನ್ನು ಪ್ರಾಧಿಕಾರ ಪ್ರಸ್ತಾಪಿಸಿದ್ದು, ಏಕರೂಪ ನಿಯಮಗಳು ಇರುವಂತೆ ಗುರಿ ನೀಡಲಾಗಿದೆ.