ಬೆಂಗಳೂರು: ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಮ್ ಕಾರ್ಪೊರೇಷನ್ ಲಿಮಿಟೆಡ್(IRCTC) ವತಿಯಿಂದ ರಾಜ್ಯದ ಭಕ್ತರು, ಪ್ರವಾಸಿಗರಿಗೆ ತೀರ್ಥಯಾತ್ರೆ ವಿಶೇಷ ರೈಲು ಪ್ರವಾಸ ಆಯೋಜಿಸಲಾಗಿದೆ.
ನವೆಂಬರ್ 26 ರಂದು ಬೆಂಗಳೂರಿನಿಂದ ರೈಲು ಹೊರಡಲಿದ್ದು, ಪುರಿ, ಕೊನಾರ್ಕ್, ಕೊಲ್ಕತ್ತಾದ ದೇವಾಲಯ ಮತ್ತು ಪ್ರವಾಸಿ ತಾಣಗಳನ್ನು ವೀಕ್ಷಿಸಬಹುದು. 6 ರಾತ್ರಿ 7 ಹಗಲು ವಿಶೇಷ ಪ್ರವಾಸ ಇರಲಿದ್ದು, 6,615 ರೂಪಾಯಿ ಒಟ್ಟು ಪ್ರವಾಸ ವೆಚ್ಚ ನಿಗದಿ ಮಾಡಲಾಗಿದೆ.
ಸ್ಲೀಪರ್ ಕ್ಲಾಸ್ ರೈಲು ಪ್ರಯಾಣವಿದ್ದು, ಉಳಿಯಲು ಡಾರ್ಮಿಟೋರೀಸ್, ಧರ್ಮಶಾಲಾ, ಹಾಲ್ ಗಳನ್ನು ಬಹು ಹಂಚಿಕೆ ಆಧಾರದಡಿ ನೀಡಲಾಗುತ್ತದೆ. ಇದರೊಂದಿಗೆ ಬೆಳಗಿನ ಉಪಹಾರ, ಕಾಫಿ-ಟೀ, ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಇರುತ್ತದೆ. 55 ಸೀಟಿನ ಸಾಮಾನ್ಯ ಬಸ್ ಗಳಲ್ಲಿ ಸ್ಥಳೀಯ ದೇವಾಲಯ ಮತ್ತು ಪ್ರವಾಸಿ ತಾಣಗಳ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುವುದು. ತೀರ್ಥಯಾತ್ರೆ ಪ್ರವಾಸಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ಎಲ್.ಟಿ.ಸಿ. ಸೌಲಭ್ಯ ಪಡೆಯಲು ಅವಕಾಶವಿರುತ್ತದೆ. irctctourism.com ವೆಬ್ಸೈಟ್ ನಲ್ಲಿ ಬುಕಿಂಗ್ ಮಾಡಬಹುದಾಗಿದೆ. ಮಾಹಿತಿಗೆ 85959 31292, 85959 31291 ಸಂಪರ್ಕಿಸಬಹುದು ಎಂದು ಹೇಳಲಾಗಿದೆ.