ಗ್ರಾಹಕರಿಗೆ ಗೊತ್ತೇ ಆಗದಂತೆ ಬ್ಯಾಂಕುಗಳು ಶುಲ್ಕ, ದಂಡ, ಸರ್ವಿಸ್ ಚಾರ್ಜ್ ಹೆಸರಲ್ಲಿ ಹಣ ವಸೂಲಿ ಮಾಡುತ್ತಿವೆ. ಬ್ಯಾಂಕುಗಳ ಬಹುತೇಕ ನಿಯಮಗಳ ಬಗ್ಗೆ ಬಹುತೇಕ ಗ್ರಾಹಕರಿಗೆ ಗೊತ್ತೇ ಇರುವುದಿಲ್ಲ. ನಿಗದಿಪಡಿಸಲಾದ ಉಚಿತ ವಹಿವಾಟುಗಳ ನಂತರದ ವಹಿವಾಟುಗಳಿಗೆ ಬ್ಯಾಂಕುಗಳು ಶುಲ್ಕ ವಿಧಿಸುತ್ತವೆ.
ಇವುಗಳ ನಡುವೆ ಮತ್ತೊಂದು ಶಾಕ್ ನೀಡಲಾಗಿದೆ. ಅಂಚೆ ಕಚೇರಿಯ ನಿಯಮಗಳಲ್ಲಿ ಬದಲಾವಣೆಯಾಗಿದೆ. ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನಲ್ಲಿ ಏಪ್ರಿಲ್ 1 ರಿಂದ ಹಣ ಪಡೆಯುವುದು ಮತ್ತು ಠೇವಣಿ ಇಡುವುದಾದರೆ ಪ್ರತಿ ವಹಿವಾಟಿನ ಮೇಲೆ ಶುಲ್ಕ ಹಾಕಲಾಗುತ್ತದೆ.
ಮೊಬೈಲ್ ನೆಟ್ ಬ್ಯಾಂಕಿಂಗ್ ಆಗಿರುವ IPPB ಯಲ್ಲಿ ಗೂಗಲ್ ಪೇ, ಪೋನ್ ಪೇ ಮೊದಲಾದವುಗಳ ರೀತಿಯಲ್ಲೇ ಬಿಲ್ ಪಾವತಿ, ಹಣ ವರ್ಗಾವಣೆ, ಸ್ವೀಕಾರ ಸೇರಿ ಅನೇಕ ವಹಿವಾಟು ನಡೆಸಬಹುದಾಗಿದೆ. ಏಪ್ರಿಲ್ 1 ರಿಂದ ಕ್ಯಾಶ್ ವಿತ್ ಡ್ರಾ ಮತ್ತು ಕ್ಯಾಶ್ ಡಿಪಾಸಿಟ್ ಮತ್ತು ಪ್ರತಿ ಟ್ರಾನ್ಸಾಕ್ಷನ್ ಗಳ ಮೇಲೆ ಶುಲ್ಕ ಅನ್ವಯವಾಗಲಿವೆ. ಮಾಹಿತಿಗಾಗಿ www.ippbonline.com ಗಮನಿಸಬಹುದಾಗಿದೆ. ಈಗಾಗಲೇ ಈ ಕುರಿತಾಗಿ IPPB ಗ್ರಾಹಕರಿಗೆ ಸಂದೇಶ ರವಾನಿಸಲಾಗಿದೆ.
ಐಪಿಪಿಬಿ ಭಾರತೀಯ ಪೋಸ್ಟಲ್ ಪೇಮೆಂಟ್ ಬ್ಯಾಂಕ್ ನಲ್ಲಿ ಏಪ್ರಿಲ್ 1 ರಿಂದ ಹಣ ಜಮಾ ಮಾಡಿದರರೆ, ಹಿಂಪಡೆದರೆ ಶುಲ್ಕ ಪಾವತಿಸಬೇಕಿದೆ. ಅದೇ ರೀತಿ ಬ್ಯಾಂಕುಗಳು ಕೂಡ ಏಪ್ರಿಲ್ 1 ರಿಂದ ಪ್ರತಿ ವಹಿವಾಟಿಗೂ ಶುಲ್ಕ ವಿಧಿಸಬಹುದಾಗಿದೆ ಎಂದು ಹೇಳಲಾಗಿದೆ.