alex Certify ಕೊರೊನಾ ಸಂದರ್ಭದಲ್ಲೂ ಹೆಚ್ಚಿನ ಗಳಿಕೆಗೆ ಕಾರಣವಾಯ್ತು ಈ ಮಾರ್ಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸಂದರ್ಭದಲ್ಲೂ ಹೆಚ್ಚಿನ ಗಳಿಕೆಗೆ ಕಾರಣವಾಯ್ತು ಈ ಮಾರ್ಗ

ದೇಶದಾದ್ಯಂತ ಕೊರೊನಾ ನಿರುದ್ಯೋಗ ಸಮಸ್ಯೆ ಸೃಷ್ಟಿಸಿದೆ. ಕೊರೊನಾ ಸಂದರ್ಭದಲ್ಲಿ ಅನೇಕ ಕಂಪನಿಗಳು ಬಾಗಿಲು ಮುಚ್ಚಿವೆ. ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಆದ್ರೆ 2020-21ರ ಆರ್ಥಿಕ ವರ್ಷವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ ಬಹಳ ಶುಭವಾಗಿತ್ತು. ಈ ಸಮಯದಲ್ಲಿ ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದವರು ಹೆಚ್ಚಿನ ಗಳಿಕೆ ಮಾಡಿದ್ದಾರೆ. ನಿಫ್ಟಿಯಲ್ಲಿ 10,000 ರೂಪಾಯಿ ಹೂಡಿಕೆ ಮಾಡಿದವರು 7100 ರೂಪಾಯಿ ಲಾಭ ಮಾಡಿದ್ದಾರೆ.

ಕೊರೊನಾ ಅವಧಿಯಲ್ಲಿ ದೇಶದ ಷೇರು ಮಾರುಕಟ್ಟೆ ಅಭಿವೃದ್ಧಿ ಹೊಂದಿತ್ತು. 2020-21ರ ಆರ್ಥಿಕ ವರ್ಷವು ಭಾರತೀಯ ಷೇರು ಮಾರುಕಟ್ಟೆಯ ಇತಿಹಾಸದಲ್ಲಿ ಅತ್ಯುತ್ತಮ ವರ್ಷವಾಗಿತ್ತು. 2020-21ರ ಆರ್ಥಿಕ ವರ್ಷದಲ್ಲಿ ಸೆನ್ಸೆಕ್ಸ್ ಶೇಕಡಾ 68 ರಷ್ಟು ಏರಿಕೆಯಾದರೆ, ನಿಫ್ಟಿ ಶೇಕಡಾ 71 ರಷ್ಟು ಏರಿಕೆ ಕಂಡಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಷೇರು ಮಾರುಕಟ್ಟೆ ಮತ್ತಷ್ಟು ಬಲಗೊಳ್ಳಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ನಿಫ್ಟಿ 16,000-16,500 ಕ್ಕೆ ಹತ್ತಿರವಾಗುವ ಸಾಧ್ಯತೆಯಿದೆ. ಸೆನ್ಸೆಕ್ಸ್ ಸಹ 55,000-56,000 ಕ್ಕೆ ಬರುವ ಸಾಧ್ಯತೆಯಿದೆ. ಷೇರು ಮಾರುಕಟ್ಟೆಯಲ್ಲಿ ಶೇಕಡಾ 10 ರಷ್ಟು ಹೆಚ್ಚಳವನ್ನು ಕಾಣಬಹುದು ಎಂದು ತಜ್ಞರು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...