ನೀವು ಬ್ಯಾಂಕ್ ಖಾತೆಯನ್ನು ತೆರೆದಿದ್ದು, ಬ್ಯಾಂಕ್ ಖಾತೆಯಲ್ಲಿ 442 ರೂಪಾಯಿ ಹಣವಿದ್ದರೆ ನಿಮ್ಮ ಕುಟುಂಬಕ್ಕೆ ದೊಡ್ಡ ಸಹಾಯ ಮಾಡಿದಂತೆ. ಅದ್ರಲ್ಲೂ ವಿಶೇಷವಾಗಿ ಈ ಕೊರೊನಾ ಕಾಲದಲ್ಲಿ ಇದು ಕುಟುಂಬಕ್ಕೆ ಹೆಚ್ಚು ಸಹಕಾರಿಯಾಗಲಿದೆ. ಮೇ 31ರೊಳಗೆ ನಿಮ್ಮ ಖಾತೆಯಲ್ಲಿ 442 ರೂಪಾಯಿ ಇರುವುದು ಅಗತ್ಯ.
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ನವೀಕರಿಸಲಾಗುವುದು. ಈ ಕಾರಣದಿಂದಾಗಿ ಬ್ಯಾಂಕ್ ಖಾತೆದಾರರಿಗೆ 442 ರೂಪಾಯಿಗಳನ್ನು ಬ್ಯಾಂಕ್ ಖಾತೆಗಳಲ್ಲಿ ಇಟ್ಟುಕೊಳ್ಳಬೇಕೆಂದು ಮನವಿ ಮಾಡಲಾಗ್ತಿದೆ.
2021-2022ರಲ್ಲಿ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಮತ್ತು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯನ್ನು ನವೀಕರಿಸಲು ನಿರ್ಧರಿಸಲಾಗಿದೆ. ಪ್ರಧಾನಿ ಜೀವನ್ ಜ್ಯೋತಿ ಬಿಮಾ ಯೋಜನೆಗಾಗಿ 330 ರೂಪಾಯಿಗಳ ಕಂತು ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಅಡಿಯಲ್ಲಿ ಖಾತೆಯಿಂದ ವಾರ್ಷಿಕ 12 ರೂಪಾಯಿ ಪ್ರಿಮಿಯಂ ಠೇವಣಿ ನಿಗದಿಪಡಿಸಲಾಗಿದೆ. ಕೊರೊನಾ ಸಾಂಕ್ರಾಮಿಕದಂತಹ ಈ ಬಿಕ್ಕಟ್ಟಿನಲ್ಲಿ ಯೋಜನೆ ಲಾಭ ಪಡೆಯಲು, ಖಾತೆದಾರರು ಅಗತ್ಯವಿರುವ 442 ರೂಪಾಯಿಗಳನ್ನು ತಮ್ಮ ಖಾತೆಗಳಲ್ಲಿ ಇಟ್ಟುಕೊಳ್ಳಬೇಕು.
ಎಲ್ಲಾ ರಾಜ್ಯ ಸರ್ಕಾರದ ಬಿಪಿಎಲ್ ಕುಟುಂಬಗಳು ಅಥವಾ ವಾರ್ಷಿಕ ಆದಾಯವು 1.80 ಲಕ್ಷ ರೂಪಾಯಿಗಿಂತ ಕಡಿಮೆ ಇದ್ದವರಿಗೆ ಇದ್ರ ಲಾಭ ಸಿಗಲಿದೆ. 18-50 ವರ್ಷದೊಳಗಿನವರು ಕೊರೊನಾ ಸೇರಿದಂತೆ ಯಾವುದೇ ರೀತಿಯಲ್ಲಿ ಸಾವನ್ನಪ್ಪಿದರೆ 2 ಲಕ್ಷ ರೂಪಾಯಿಯನ್ನು ಕುಟುಂಬಸ್ಥರಿಗೆ ಪರಿಹಾರವಾಗಿ ನೀಡಲಾಗುವುದು.
ಈ ಯೋಜನೆಯನ್ನು ಪಡೆಯಲು ಗ್ರಾಹಕರು ಸಾಮಾನ್ಯ ಸೇವಾ ಕೇಂದ್ರಗಳಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಸೇವಾ ಕೇಂದ್ರದಿಂದ ಫಾರ್ಮ್ ಭರ್ತಿ ಮಾಡಿದ ನಂತರ, ಒಂದು ದಾಖಲೆ ಪತ್ರ ಸಿಗಲಿದೆ. ಅದನ್ನು ಬ್ಯಾಂಕ್ ಗೆ ನೀಡಿ ಖಾತೆ ನವೀಕರಿಸಬೇಕು. ಪ್ರಧಾನಿ ಜೀವನ್ ಜ್ಯೋತಿ ಬಿಮಾ ಯೋಜನೆ ಅಡಿಯಲ್ಲಿ, ಕೋವಿಡ್ ಸೇರಿದಂತೆ ಯಾವುದೇ ಸ್ಥಿತಿಯಲ್ಲಿ ಸಾವು ಸಂಭವಿಸಿದರೂ ಎರಡು ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಲಾಗುತ್ತದೆ. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಲ್ಲಿ ಯಾವುದೇ ಅಪಘಾತದಲ್ಲಿ ಸಾವು ಸಂಭವಿಸಿದ್ರೆ ಮಾತ್ರ ಎರಡು ಲಕ್ಷ ರೂಪಾಯಿಗಳ ವಿಮಾ ರಕ್ಷಣೆ ಸಿಗಲಿದೆ.