
ನವದೆಹಲಿ: ಕೊರೋನಾ ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ನಿರ್ಬಂಧ ಮುಂದುವರಿಸಲಾಗಿದೆ.
ಜುಲೈ 15 ರ ವರೆಗೆ ಅಂತರಾಷ್ಟ್ರೀಯ ವಿಮಾನ ಯಾನಕ್ಕೆ ನಿರ್ಬಂಧ ಮುಂದುವರಿಕೆ ಮಾಡಲು ನಾಗರಿಕ ವಿಮಾನಯಾನ ಸಚಿವಾಲಯದ ವತಿಯಿಂದ ಆದೇಶ ಹೊರಡಿಸಲಾಗಿದೆ. ಅಂತರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ ವಿಮಾನ ಸೇವೆಗಳ ನಿಷೇಧವನ್ನು ಜುಲೈ 15ರವರೆಗೆ ವಿಸ್ತರಿಸಲಾಗಿದೆ. ಅಂತರರಾಷ್ಟ್ರೀಯ ಕಾರ್ಗೋ ಕಾರ್ಯಾಚರಣೆ ವಿಮಾನಗಳು ಮತ್ತು ನಿರ್ದಿಷ್ಟ ಅನುಮತಿ ಪಡೆದ ವಿಮಾನಗಳಿಗೆ ಇದು ಅನ್ವಯವಾಗುವುದಿಲ್ಲ ಎಂದು ಹೇಳಲಾಗಿದೆ.
ವಿಮಾನಯಾನ ಸಚಿವಾಲಯ ಆಯ್ದ ಮಾರ್ಗಗಳಲ್ಲಿ ನಿಬಂಧನೆ, ಮಾರ್ಗಸೂಚಿಗಳೊಂದಿಗೆ ದೇಶಿಯ ವಿಮಾನಯಾನಕ್ಕೆ ಅವಕಾಶ ನೀಡಲಾಗಿದೆ.