
ನವದೆಹಲಿ: ಗೃಹ ಸಾಲ, ವಾಹನ ಸಾಲ ಸೇರಿದಂತೆ ಎರಡು ಕೋಟಿ ರೂಪಾಯಿ ಒಳಗಿನ ವಿವಿಧ ಸಾಲಗಾರರಿಗೆ ಮುಖ್ಯ ಮಾಹಿತಿ ಇಲ್ಲಿದೆ.
ಲಾಕ್ ಡೌನ್ ಅವಧಿಯಲ್ಲಿ ಇಎಂಐ ಮುಂದೂಡಿಕೆ ಸೌಲಭ್ಯ ನೀಡಲಾಗಿದ್ದು, ಆರು ತಿಂಗಳ ಅವಧಿಗೆ ಅನ್ವಯವಾಗುವಂತೆ ಸಾಲಗಾರರಿಗೆ ಚಕ್ರಬಡ್ಡಿ ಮನ್ನಾ ಮರು ಪಾವತಿ ಆರಂಭಿಸಲಾಗಿದ್ದು, ಬ್ಯಾಂಕುಗಳಿಂದ ಸಂದೇಶ ರವಾನೆಯಾಗುತ್ತಿದೆ.
ಚಕ್ರಬಡ್ಡಿ ಮರುಪಾವತಿಯನ್ನು ಬ್ಯಾಂಕುಗಳು ಆರಂಭಿಸಿವೆ. 2 ಕೋಟಿ ರೂಪಾಯಿ ಒಳಗಿನ ಗೃಹ ಸಾಲ, ಶಿಕ್ಷಣ ಸಾಲ, ಕ್ರೆಡಿಟ್ ಕಾರ್ಡ್, ಗೃಹ ಬಳಕೆ ವಸ್ತುಗಳ ಖರೀದಿ ಸಾಲ ಮೊದಲಾದ ಸಾಲಗಳ ಮೇಲಿನ ಚಕ್ರಬಡ್ಡಿಗೆ ಇದು ಅನ್ವಯವಾಗುತ್ತದೆ. ಗ್ರಾಹಕರ ಖಾತೆಗೆ ಸಾಲದ ಚಕ್ರಬಡ್ಡಿಯ ಪರಿಹಾರ ಪ್ರೋತ್ಸಾಹ ಧನದ ಮೊತ್ತವನ್ನು ಪಾವತಿ ಮಾಡಲಾಗಿದೆ ಎಂದು ಸಂದೇಶ ಕಳುಹಿಸಲಾಗಿದೆ.