ಕೊರೋನಾ ಸೋಂಕು ಕುಟುಂಬದ ಆಧಾರ ಸ್ತಂಭಗಳಾಗಿದ್ದ ಅನೇಕರ ಜೀವ ಕಸಿದಿದೆ. ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಇಂತಹ ಸಂದರ್ಭದಲ್ಲಿ ಬ್ಯಾಂಕ್ ಖಾತೆ ಮೂಲಕ ಮಾಡಿಸುವ ವಿಮೆ ಸಹಾಯಕ್ಕೆ ಬರಲಿದೆ.
ಜನ್ ಧನ್ ಮತ್ತು ಇತರೆ ಬ್ಯಾಂಕ್ ಖಾತೆ ಹೊಂದಿದವರಿಗೆ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಜೀವನ್ ಸುರಕ್ಷಾ ವಿಮಾ ಯೋಜನೆಯನ್ನು ಜಾರಿಗೊಳಿಸಿದೆ. ವಾರ್ಷಿಕ 12 ರೂ. ಮತ್ತು 330 ರೂ. ಪಾವತಿಸಿದಲ್ಲಿ ಅವಘಡದ ಸಂದರ್ಭದಲ್ಲಿ ವಿಮೆ ಸೌಲಭ್ಯ ಪಡೆಯಬಹುದಾಗಿದೆ.
ವಿಮೆದಾರರು ಮೃತಪಟ್ಟಲ್ಲಿ ನಾಮಿನಿ ದಾಖಲೆಗಳೊಂದಿಗೆ ಬ್ಯಾಂಕ್ ಗೆ ಅರ್ಜಿ ಸಲ್ಲಿಸಬಹುದು. ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಅಡಿ ವಾರ್ಷಿಕವಾಗಿ 12 ರೂಪಾಯಿ ಪಾವತಿಸಿದರೆ 18 ರಿಂದ 70 ವರ್ಷದ ವಯಸ್ಸಿನ ವ್ಯಕ್ತಿಗಳು ಮೃತಪಟ್ಟಲ್ಲಿ, ಪೂರ್ಣ ಪ್ರಮಾಣದ ಅಂಗವೈಕಲ್ಯಕ್ಕೆ ತುತ್ತಾದರೆ ಎರಡು ಲಕ್ಷ ರೂಪಾಯಿ ಪರಿಹಾರ ಸಿಗಲಿದೆ. ಭಾಗಶಃ ಅಂಗವೈಕಲ್ಯಕ್ಕೆ ಒಳಗಾದರೆ 1 ಲಕ್ಷ ರೂ. ವಿಮೆ ಪರಿಹಾರ ಸಿಗಲಿದೆ.
ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯಡಿ ವಾರ್ಷಿಕವಾಗಿ 330 ರೂಪಾಯಿ ಪಾವತಿಸಿದ ಖಾತೆದಾರರು ಯಾವುದೇ ಕಾರಣದಿಂದ ಮೃತಪಟ್ಟರು 2 ಲಕ್ಷ ರೂ. ವಿಮೆ ಪರಿಹಾರ ಸಿಗಲಿದೆ. ಕೊರೊನಾದಿಂದ ಮೃತಪಟ್ಟವರ ಅವಲಂಬಿತರಿಗೆ 2 ಲಕ್ಷ ರೂ ಪರಿಹಾರ ನಿಡಲಾಗುವುದು. ಆದರೆ, ಮಾಹಿತಿ ಕೊರತೆಯಿಂದ ಬಹುತೇಕರಿಗೆ ಈ ಸೌಲಭ್ಯ ಸಿಗುತ್ತಿಲ್ಲ ಎಂದು ಹೇಳಲಾಗಿದೆ.
ಎರಡು ವಿಮೆಗೆ ಹಣ ಪಾವತಿಸಿದ ವಿಮೆದಾರರು ನಿಯಮಗಳ ವ್ಯಾಪ್ತಿಯಲ್ಲಿ ಇದ್ದರೆ 2 ರಿಂದ 4 ಲಕ್ಷ ರೂಪಾಯಿ ಪರಿಹಾರ ಪಡೆಯಬಹುದು ಎನ್ನಲಾಗಿದೆ.