ನವದೆಹಲಿ: ಪ್ರಸ್ತುತ ಚಾಲ್ತಿಯಲ್ಲಿರುವ ಆರೋಗ್ಯ ವಿಮೆಗಳ ಪ್ರೀಮಿಯಂ ಮೊತ್ತ ಹೆಚ್ಚಳ ಮಾಡುವಂತಹ ಯಾವುದೇ ಬದಲಾವಣೆಗೆ ಮುಂದಾಗದಂತೆ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ ವಿಮಾ ಕಂಪನಿಗಳಿಗೆ ಸೂಚನೆ ನೀಡಲಾಗಿದೆ.
IRDAI ನೀಡಿರುವ ಈ ಸೂಚನೆ ವೈಯಕ್ತಿಕ ಅಪಘಾತ ಮತ್ತು ಪ್ರಯಾಣ ವಿಮೆಗಳಿಗೂ ಕೂಡ ಅನ್ವಯವಾಗಲಿವೆ. ಪ್ರೀಮಿಯ ಮೊತ್ತದಲ್ಲಿ ಹೆಚ್ಚಳಕ್ಕೆ ಕಾರಣವಾಗುವಂತಹ ಈಗಾಗಲೇ ನೀಡಲಾದ ಸೌಲಭ್ಯಗಳಲ್ಲಿ ಯಾವುದೇ ಬದಲಾವಣೆ ತರಲು ಮತ್ತು ಈಗಿರುವ ಉತ್ಪನ್ನಗಳು ಹೆಚ್ಚುವರಿ ಸೌಲಭ್ಯ ನೀಡಲು ವಿಮಾ ಕಂಪನಿಗಳಿಗೆ ಅವಕಾಶವಿಲ್ಲವೆಂದು ಹೇಳಲಾಗಿದೆ.
ನಿಯಮಗಳ ಅನುಸಾರ ವಿಮೆ ಕಂಪನಿಗಳು ವಿಮೆಗಳಲ್ಲಿ ಸಣ್ಣ ಬದಲಾವಣೆ ತರಲು ಅವಕಾಶ ಇದೆ. ಹೆಚ್ಚುವರಿ ಪ್ರಯೋಜನ ಸೇರ್ಪಡೆ, ಈಗಾಗಲೇ ನೀಡಿದ ಪ್ರಯೋಜನಗಳನ್ನು ಮೇಲ್ದರ್ಜೆಗೇರಿಸುವುದನ್ನು ಕಂಪನಿಗಳು ಮಾಡಬಹುದು. ವಿಮೆ ಖರೀದಿಸುವವರಿಗೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಅವರ ಇಚ್ಚೆ ಇದ್ದಲ್ಲಿ ಮಾತ್ರ ಸೌಲಭ್ಯ ನೀಡಬೇಕು. ವಿಮೆಯಲ್ಲಿ ಬಳಕೆ ಮಾಡಲಿರುವ ಪದಗಳು ಸರಳವಾಗಿ ಸುಲಭವಾಗಿ ಅರ್ಥವಾಗುವಂತೆ ಇರಬೇಕೆಂದು ಹೇಳಲಾಗಿದೆ.