alex Certify ‘ಆರೋಗ್ಯ ಸಂಜೀವಿನಿ’ ಫಲಾನುಭವಿಗಳಿಗೆ ಗುಡ್ ನ್ಯೂಸ್: ವಿಮೆ ಕವರೇಜ್ 10 ಲಕ್ಷ ರೂ.ಗೆ ಏರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಆರೋಗ್ಯ ಸಂಜೀವಿನಿ’ ಫಲಾನುಭವಿಗಳಿಗೆ ಗುಡ್ ನ್ಯೂಸ್: ವಿಮೆ ಕವರೇಜ್ 10 ಲಕ್ಷ ರೂ.ಗೆ ಏರಿಕೆ

ಹೈದರಾಬಾದ್: ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ ಸ್ಟಾಂಡರ್ಡ್ ಹೆಲ್ತ್ ಇನ್ಸೂರೆನ್ಸ್ ಯೋಜನೆಯಾಗಿರುವ ಆರೋಗ್ಯ ಸಂಜೀವಿನಿ ವಿಮೆ ಅಡಿಯಲ್ಲಿ ಕವರೇಜ್ ಅನ್ನು 5 ಲಕ್ಷ ದಿಂದ 10 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ.

ಹೆಚ್ಚಿನ ಸಂಖ್ಯೆಯ ಜನರನ್ನು ಆರೋಗ್ಯ ವಿಮೆ ವ್ಯಾಪ್ತಿಗೆ ಒಳಪಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಆರೋಗ್ಯ ವಿಮೆ ಕಂಪನಿಗಳು ಈ ವಿಮೆ ಯೋಜನೆಯನ್ನು ಒದಗಿಸುವುದು ಕಡ್ಡಾಯವಾಗಿದೆ. 2020 ರ ಮಾರ್ಚ್ ನಲ್ಲಿ ಆರೋಗ್ಯ ವಿಮೆ ಯೋಜನೆಯನ್ನು ಆರಂಭಿಸಲಾಗಿದ್ದು, ಈ ವಿಮೆ ಯೋಜನೆಯಡಿ 50 ಸಾವಿರ ರೂ.ನಿಂದ 10  ಲಕ್ಷ ರೂವರೆಗೆ ಪರಿಹಾರ ಪಡೆಯಬಹುದಾಗಿದೆ. ಹಿಂದೆ 1 ಲಕ್ಷ ರೂ. ನಿಂದ 5 ಲಕ್ಷ ರೂ. ವರೆಗೆ ಕವರೇಜ್ ಇತ್ತು.

ಕುಟುಂಬದ ವೈದ್ಯಕೀಯ ವೆಚ್ಚಗಳನ್ನು ಭರಿಸಲು ಸಹಕಾರಿಯಾಗಿರುವ ಆರೋಗ್ಯ ಸಂಜೀವಿನಿ ವಿಮೆ ಯೋಜನೆಯನ್ನು ಎಲ್ಲಾ ಆರೋಗ್ಯ ವಿಮೆ ಕಂಪನಿಗಳು ಕಡ್ಡಾಯವಾಗಿ ಹೊಂದಿರಬೇಕು. ವೈಯಕ್ತಿಕ ಮತ್ತು ಕೌಟುಂಬಿಕವಾಗಿ ವಿಮೆ ಖರೀದಿಸಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...