ಆರೋಗ್ಯ ವಿಮೆಗೆ ಸಂಬಂಧಿಸಿದಂತೆ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಮಹತ್ವದ ಸೂಚನೆ ನೀಡಿದೆ. ಆರೋಗ್ಯ ವಿಮೆಗೆ ಸಂಬಂಧಿಸಿದಂತೆ ವಿಮಾ ಕಂಪನಿಗಳು ಹಕ್ಕನ್ನು ತಿರಸ್ಕರಿಸಿದರೆ ಅದ್ರ ಬಗ್ಗೆ ವಿಮಾದಾರರಿಗೆ ಸ್ಪಷ್ಟ ಮಾಹಿತಿ ನೀಡಬೇಕೆಂದು ಐಆರ್ಡಿಎ ಹೇಳಿದೆ. ಹಾಗೆ ಪೂರ್ವಭಾವಿ ಕಲ್ಪನೆ ಅಥವಾ ಅನುಮಾನದ ಆಧಾರದ ಮೇಲೆ ಹಕ್ಕನ್ನು ವಜಾಗೊಳಿಸದಂತೆ ಸೂಚನೆ ನೀಡಿದೆ.
ಆರೋಗ್ಯ ವಿಮಾ ಹಕ್ಕುಗಳ ಇತ್ಯರ್ಥ ಪ್ರಕ್ರಿಯೆಯನ್ನು ಪಾರದರ್ಶಕವಾಗಿಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಸಂಬಂಧ ಎಲ್ಲಾ ವಿಮಾ ಕಂಪೆನಿಗಳು ಕಾರ್ಯವಿಧಾನಗಳನ್ನು ರೂಪಿಸುವುದು ಕಡ್ಡಾಯವಾಗಿದೆ. ಇದ್ರಿಂದ ವಿಮಾದಾರರಿಗೆ ಹಕ್ಕು ಪಡೆಯುವ ವಿವಿಧ ಹಂತಗಳ ಬಗ್ಗೆ ಪಾರದರ್ಶಕ ರೀತಿಯಲ್ಲಿ ಮಾಹಿತಿ ನೀಡಬಹುದು ಎಂದು ಐಆರ್ಡಿಎ ಹೇಳಿದೆ.
ವಿಮಾದಾರನು ನಗದುರಹಿತ ಚಿಕಿತ್ಸೆ, ವಿಮಾ ಕಂಪನಿ, ಟಿಪಿಎಯಲ್ಲಿ ಸಲ್ಲಿಸಿದ ಹಕ್ಕುಗಳ ಸ್ಥಿತಿಯ ಬಗ್ಗೆ ವೆಬ್‌ಸೈಟ್, ಪೋರ್ಟಲ್ ಅಪ್ಲಿಕೇಶನ್ ನಲ್ಲಿ ಮಾಹಿತಿಯನ್ನು ಪಡೆಯಬಹುದಾದ ವ್ಯವಸ್ಥೆ ಕಲ್ಪಿಸಬೇಕು ಎಂದು ಐಆರ್ಡಿಎ ಹೇಳಿದೆ. ಟಿಪಿಎ ವಿಮಾ ಕಂಪನಿಯ ಪರವಾಗಿ ಹಕ್ಕುಗಳನ್ನು ಇತ್ಯರ್ಥಪಡಿಸಿದರೆ, ಎಲ್ಲಾ ಮಾಹಿತಿಯನ್ನು ವಿಮಾದಾರರಿಗೆ ನೀಡಬೇಕಾಗುತ್ತದೆ ಎಂದು ಐಆರ್ಡಿಎ ಹೇಳಿದೆ.