ಸಾಮಾಜಿಕ ಜಾಲತಾಣಗಳು ಅನೇಕರ ಗಳಿಕೆಗೆ ದಾರಿ ಮಾಡಿಕೊಟ್ಟಿವೆ. ಬ್ರಿಟನ್ ನ ದಂಪತಿ ಬದುಕು ಇದಕ್ಕೆ ನಿದರ್ಶನ. ಇನ್ಸ್ಟ್ರಾಗ್ರಾಮ್ ನಲ್ಲಿ ಪ್ರಸಿದ್ಧಿ ಪಡೆದಿರುವ ಜೋಡಿ ಜ್ಯಾಕ್ ಮೋರಿಸ್ ಮತ್ತು ಆಸ್ಟ್ರೇಲಿಯಾದ ಲಾರೆನ್ ಬುಲೆನ್ ಪ್ರವಾಸಿ ಬ್ಲಾಗರ್. ಇನ್ಸ್ಟ್ರಾಗ್ರಾಮ್ ನಲ್ಲಿ ತಲಾ 27 ಲಕ್ಷ ಹಾಗೂ 21 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ.
ಈ ಜೋಡಿ ಬಾಲಿಯಲ್ಲಿ ಐಷಾರಾಮಿ ಮನೆ ನಿರ್ಮಿಸಿದ್ದಾರೆ. ಎರಡು ಅಂತಸ್ತಿನ ಈ ಮನೆ ನಿರ್ಮಾಣಕ್ಕೆ ಇನ್ಸ್ಟ್ರಾಗ್ರಾಮ್ ಗಳಿಕೆಯನ್ನು ಬಳಸಲಾಗಿದೆ. ಮನೆ ನಿರ್ಮಾಣಕ್ಕೆ ದಂಪತಿ ಜಮೀನು ಖರೀದಿ ಮಾಡಿದ್ದರಂತೆ.
ನನ್ನ ಮನೆಯಿಂದ 7000 ಮೈಲಿ ದೂರದಲ್ಲಿ ತನ್ನ ಕನಸಿನ ಹುಡುಗಿ ಜೊತೆ ನನ್ನದೇ ಮನೆಯಲ್ಲಿ ವಾಸವಾಗ್ತೇನೆಂದು ಎಂದೂ ಎಣಿಸಿರಲಿಲ್ಲ. ಇನ್ಸ್ಟ್ರಾಗ್ರಾಮ್ ಪ್ರಾಯೋಜಕತ್ವ ಹಾಗೂ ಬ್ರಾಂಡ್ ಪ್ರಚಾರದಲ್ಲಿ ಇಷ್ಟೊಂದು ಹಣ ಗಳಿಸಿದ್ದೇನೆಂದು ಜ್ಯಾಕ್ ಹೇಳಿದ್ದಾನೆ. ಜ್ಯಾಕ್ ಒಂದು ಪೋಸ್ಟ್ ಗೆ 6 ಲಕ್ಷ ಪಡೆದ್ರೆ, ಲಾರೆನ್ 5 ಲಕ್ಷ ರೂಪಾಯಿ ಪಡೆದಿದ್ದಾಳೆ.