ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡನೆ ಮಾಡ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಚೇತರಿಕೆ ಕಾಣಿಸಿದೆ. ಕಳೆದ ವಾರ ಇಳಿಕೆ ಮುಖ ಕಂಡಿದ್ದ ಷೇರು ಮಾರುಕಟ್ಟೆಯಲ್ಲಿ ಇಂದು ಬಹಳಷ್ಟು ಹೆಚ್ಚಳ ಕಂಡು ಬಂದಿದೆ. ಸಾಮಾನ್ಯ ಬಜೆಟ್ ಮಾರುಕಟ್ಟೆ ದಿಕ್ಕು ಬದಲಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವ ಮೊದಲು ಹಣಕಾಸು ಸಚಿವರ ಘೋಷಣೆಯನ್ನು ಎಚ್ಚರಿಕೆಯಿಂದ ಆಲಿಸಬೇಕು. ಮೂಲ ಸೌಕರ್ಯ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಬಜೆಟ್ ನಲ್ಲಿ ಹೆಚ್ಚು ಒತ್ತು ನೀಡಲಾಗಿದೆ. ಹಾಗಾಗಿ ಹೂಡಿಕೆದಾರರು ಈ ಕ್ಷೇತ್ರಗಳ ಕಂಪನಿ ಷೇರುಗಳಲ್ಲಿ ಹೆಚ್ಚು ಹೂಡಿಕೆ ಮಾಡಬಹುದು. ಇದಲ್ಲದೆ ಸೆಕ್ಟರ್ ವೈಸ್ ಘೋಷಣೆಗಳನ್ನು ಗಮನಿಸಿ ನಂತ್ರ ಹೂಡಿಕೆ ಮಾಡುವುದು ಒಳ್ಳೆಯದು.
ಮತ್ತೊಂದೆಡೆ ಇಂದು 37 ಕಂಪನಿಗಳು ತಮ್ಮ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸಲಿವೆ. ಇದರಲ್ಲಿ ಕ್ಯಾಸ್ಟ್ರೋಲ್ ಇಂಡಿಯಾ, ಫೋರ್ಟಿಸ್ ಆಸ್ಪತ್ರೆ, ರಿಲಯನ್ಸ್ ಕ್ಯಾಪಿಟಲ್, ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಮುಂತಾದ ದೊಡ್ಡ ಕಂಪನಿಗಳು ಸೇರಿವೆ. ಈ ಕಂಪನಿಗಳ ಷೇರುಗಳ ಮೇಲೆ ಕೂಡ ನೀವು ಗಮನ ನೀಡಬಹುದು. ಎಲ್ಲ ಅಂಶವನ್ನು ಗಮನಿಸಿ ಉತ್ತಮ ಕಂಪನಿ ಷೇರು ಖರೀದಿಸುವುದು ಉಳಿತು.