ನವದೆಹಲಿ: ಕೊರೋನಾ ಕಾರಣದಿಂದಾಗಿ ಒಂದು ವರ್ಷಕ್ಕೂ ಅಧಿಕ ಅವಧಿಯಿಂದ ಮನೆಯಿಂದಲೇ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಕಚೇರಿಗೆ ಮರಳುವಂತೆ ಈಗಾಗಲೇ ಅನೇಕ ಕಂಪನಿಗಳು ಸೂಚನೆ ನೀಡಿವೆ.
ದೇಶದ ಐಟಿ ದಿಗ್ಗಜ ಇನ್ಫೋಸಿಸ್ ಕೂಡ ತನ್ನ ಕಚೇರಿಗಳನ್ನು ತೆರೆಯುವುದಾಗಿ ಹೇಳಿದ್ದು, ಉದ್ಯೋಗಿಗಳು ಕಚೇರಿಗೆ ಮರಳಬಹುದಾಗಿದೆ ಎಂದು ತಿಳಿಸಿದೆ.
ಕೊರೋನಾ ಎರಡನೇ ಅಲೆ ಮುಕ್ತಾಯದ ಹಂತದಲ್ಲಿದೆ. ವರ್ಕ್ ಫ್ರಮ್ ಹೋಮ್ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಕಚೇರಿಗೆ ಬರಬಹುದು. ಸ್ವಪ್ರೇರಣೆಯಿಂದ ಉದ್ಯೋಗಿಗಳು ಕಚೇರಿಗೆ ಬರುವುದಾಗಿ ಅನೇಕರು ಹೇಳಿದ್ದಾರೆ. ಶೇಕಡ 70 ರಷ್ಟು ಉದ್ಯೋಗಿಗಳು ಲಸಿಕೆ ಕೂಡ ಪಡೆದುಕೊಂಡಿದ್ದಾರೆ. ಸುರಕ್ಷತೆ ಕ್ರಮಗಳೊಂದಿಗೆ ಕಚೇರಿಯಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ. ಲಸಿಕೆ ಪಡೆದ ನಂತರ ಉದ್ಯೋಗಿಗಳಿಗೆ ಸುರಕ್ಷತೆಯ ಭಾವ ಮೂಡಿದ್ದು, ಕೆಲವು ವಿಭಾಗಗಳು ಉದ್ಯೋಗಿಗಳು ಕಚೇರಿಗೆ ಬರಬಹುದು ಎಂದು ಅಪೇಕ್ಷಿಸಿದ್ದು, ಕಚೇರಿಗೆ ಬಂದು ಕಾರ್ಯನಿರ್ವಹಿಸಬಹುದೆಂದು ಹೇಳಲಾಗಿದೆ.