ಮುಂಬೈ: ಭಾರತದ ಪ್ರಮುಖ ಐಟಿ ಕಂಪನಿ ಬೆಂಗಳೂರು ಮೂಲದ ಇನ್ಫೋಸಿಸ್ ಉದ್ಯೋಗದ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳಿಗೆ ಮತ್ತೆ ನಿರಾಸೆ ಮೂಡಿಸಿದೆ.
ಡಿಸೆಂಬರ್ ತ್ರೈಮಾಸಿಕದ ಫಲಿತಾಂಶವನ್ನು ಇನ್ಫೋಸಿಸ್ ಪ್ರಕಟಿಸಿದ್ದು, ಸದ್ಯಕ್ಕೆ ಯಾವುದೇ ಕ್ಯಾಂಪಸ್ ನೇಮಕಾತಿ ಸೆಲೆಕ್ಷನ್ ಇರುವುದಿಲ್ಲ ಎಂದು ಹೇಳಿದೆ. ಈ ರೀತಿ ಇನ್ಫೋಸಿಸ್ ನಿರ್ಧಾರ ಕೈಗೊಂಡಿರುವುದು ಯುವಕರ ಉದ್ಯೋಗಾವಕಾಶಗಳ ಮೇಲೆ ನೇರ ಪರಿಣಾಮ ಬೀರಲಿದೆ. ಕಳೆದ ತ್ರೈಮಾಸಿಕದಲ್ಲಿಯೂ ಇನ್ಫೋಸಿಸ್ ಕ್ಯಾಂಪಸ್ ನೇಮಕಾತಿ ಕೈಗೊಂಡಿರಲಿಲ್ಲ.
ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ನಿಲಂಜನ್ ರಾಯ್ ಈ ಬಗ್ಗೆ ಮಾತನಾಡಿ, ಕಂಪನಿಗೆ ಹೆಚ್ಚಿನ ಉದ್ಯೋಗಿಗಳ ಅಗತ್ಯವಿದ್ದಲ್ಲಿ ಕ್ಯಾಂಪಸ್ ಹೊರಗೆ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ದೇಶದ ಅತಿ ದೊಡ್ಡ ಐಟಿ ಕಂಪನಿ ಟಿಸಿಎಸ್ 2024 -25ನೇ ಆರ್ಥಿಕ ವರ್ಷದಲ್ಲಿ ಕ್ಯಾಂಪಸ್ ನೇಮಕಾತಿ ಕೈಗೊಳ್ಳುವುದಾಗಿ ತಿಳಿಸಿದೆ. ಡಿಸೆಂಬರ್ ತ್ರೈಮಾಸಿಕ ಅವಧಿಯಲ್ಲಿ ಟಿಸಿಎಸ್ ಒಟ್ಟು ಉದ್ಯೋಗಿಗಳ ಸಂಖ್ಯೆ 5680ರಷ್ಟು ಕಡಿಮೆಯಾಗಿದೆ.