ಸಾಮಾನ್ಯವಾಗಿ ದೇಸೀ ವಿಮಾನಯಾನದ ಮಾರ್ಗಗಳಲ್ಲಿ ಇನ್-ಫ್ಲೈಟ್ ಘೋಷಣೆಯನ್ನು ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಮಾಡಲಾಗುತ್ತದೆ. ಆದರೆ ಇಂಡಿಗೋ ಪೈಲಟ್ ಒಬ್ಬರು ಪ್ರಯಾಣಿಕರಿಗೆ ತಮಿಳಿನಲ್ಲಿ ಘೋಷಣೆ ಮಾಡುವ ಮೂಲಕ ನೆಟ್‌ನಲ್ಲಿ ವೈರಲ್ ಆಗಿದ್ದಾರೆ.
ಚೆನ್ನೈ-ಮಧುರೈ ಫ್ಲೈಟ್‌ನ ಫಸ್ಟ್ ಆಫೀಸರ್ ಕ್ಯಾಪ್ಟನ್ ಜಿ. ಪ್ರಿಯವಿಘ್ನೇಶ್, ಪ್ರಯಾಣಿಕರಿಗೆ ಘೋಷಣೆ ಮಾಡಿದ ತಮ್ಮ ಪುಟ್ಟದೊಂದು ವಿಡಿಯೋ ಕ್ಲಿಪ್ ಅನ್ನು ಫೇಸ್ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.
ತಮಿಳಿನಲ್ಲಿ ಸುರಕ್ಷತೆ ಕುರಿತಂತೆ ಸೂಚನೆಗಳನ್ನು ಕೊಟ್ಟದ್ದು ಮಾತ್ರವಲ್ಲದೇ, ತ್ರಿಚಿ ಬಳಿ ಕಾವೇರಿ ನದಿಯು ಕೊಲ್ಲಿದಾಮ ಹಾಗೂ ಕಾವೇರಿ ಎಂಬ ಎರಡು ಶಾಖೆಗಳಾಗಿ ವಿಭಜನೆಯಾಗುವ ಜಾಗ, ಈ ಎರಡು ಶಾಖೆಗಳ ಮಧ್ಯೆ ಇರುವ ಶ್ರೀರಂಗಂ ದೇವಸ್ಥಾನ, ಮಧುರೈ ಬಳಿಯ ಅರಣ್ಯ ಪ್ರದೇಶ ಸೇರಿದಂತೆ ಫ್ಲೈಟ್‌ನಿಂದ ನೋಡಬಹುದಾದ ಜಾಗಗಳ ವಿವರಣೆಗಳನ್ನೂ ಸಹ ತಮ್ಮ ಪ್ರಯಾಣಿಕರಿಗೆ ತಿಳಿಸಿ ಹೇಳಿದ್ದಾರೆ ಪ್ರಿಯವಿಘ್ನೇಶ್. ಅವರ ಈ ಪ್ರಯತ್ನಕ್ಕೆ ಪ್ರೋತ್ಸಾಹ ಕೊಟ್ಟಿರುವ ಹಿರಿಯ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಘೋಷಣೆಗಳನ್ನು ತಮಿಳಿನಲ್ಲೇ ಮಾಡಲು ಉತ್ತೇಜನ ನೀಡಿದ್ದಾರೆ.
https://www.facebook.com/priyavignesh.govindharaj/videos/3401291499915488/?t=1