ನವದೆಹಲಿ: ದೇಶದಲ್ಲಿ ಅತಿವೃಷ್ಟಿಯಿಂದಾಗಿ ಭತ್ತದ ಬಿತ್ತನೆ ಪ್ರಮಾಣದಲ್ಲಿ ಇಳಿಕೆ, ಇಳುವರಿ ಕುಂಠಿತ ಮೊದಲಾದ ಕಾರಣದಿಂದ ಮುಂದಿನ ದಿನಗಳಲ್ಲಿ ಅಕ್ಕಿಯ ದರ ಮತ್ತಷ್ಟು ಏರಿಕೆ ಕಾಣಲಿದೆ ಎಂಬ ಆತಂಕದಲ್ಲಿದ್ದ ಜನಸಾಮಾನ್ಯರಿಗೆ ಸಿಹಿ ಸುದ್ದಿ ಸಿಕ್ಕಿದೆ.
ಅಕ್ಕಿ ಬೆಲೆ ಏರಿಕೆ ಬಗ್ಗೆ ಆತಂಕ ಬೇಡವೆಂದು ಕೇಂದ್ರ ಸರ್ಕಾರ ತಿಳಿಸಿದೆ. ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದ ದಾಸ್ತಾನು ಇದ್ದು, ಅಕ್ಕಿ ಬೆಲೆ ನಿಯಂತ್ರಣದಲ್ಲಿದೆ. ಮುಂದಿನ ದಿನಗಳಲ್ಲಿಯೂ ದರ ಇದೆ ಪ್ರಮಾಣದಲ್ಲಿ ಮುಂದುವರೆಯಲಿದೆ ಎಂದು ಆಹಾರ ಸಚಿವಾಲಯದಿಂದ ಹೇಳಿಕೆ ನೀಡಲಾಗಿದೆ.
ಕೇಂದ್ರ ಸರ್ಕಾರ ನುಚ್ಚಕ್ಕಿ ರಫ್ದಿನ ಮೇಲೆ ನಿಷೇಧ ಹೇರಿದ್ದು, ಬಾಸ್ಮತಿ ಹೊರತಾದ ಅಕ್ಕಿಯ ರಫ್ತು ಮೇಲೆ ತೆರಿಗೆಯನ್ನು ಶೇಕಡ 20ರಷ್ಟು ಏರಿಕೆ ಮಾಡಲಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಸಾಕಷ್ಟು ಅಕ್ಕಿ ಲಭ್ಯವಿದೆ. ಜನರಿಗೆ ದರ ಏರಿಕೆ ಬಗ್ಗೆ ಭಯ ಬೇಡ ಎಂದು ಹೇಳಲಾಗಿದೆ.