ಕಳೆದ ತಿಂಗಳಿಗೆ ಹೋಲಿಸಿದ್ರೆ ಭಾರತದಲ್ಲಿ ನಿರುದ್ಯೋಗಿತನ ಮತ್ತಷ್ಟು ಏರಿಕೆ ಕಂಡಿದೆ. ಸೆಪ್ಟೆಂಬರ್ ತಿಂಗಳಲ್ಲಿ 6.67ಪ್ರತಿಶತವಿದ್ದ ನಿರುದ್ಯೋಗಿತನದ ಪ್ರಮಾಣ ಅಕ್ಟೋಬರ್ ಅಂತ್ಯದ ವೇಳೆ 6.98 ಪ್ರತಿಶತದಷ್ಟಾಗಿದೆ ಅಂತಾ ಭಾರತೀಯ ಅರ್ಥವ್ಯವಸ್ಥೆ ಮೇಲ್ವಿಚಾರಣಾ ಕೇಂದ್ರ ಮಾಹಿತಿ ನೀಡಿದೆ .
ಕೊರೊನಾ ವೈರಸ್ನಿಂದಾಗಿ ಭಾರತದಲ್ಲಿ 8.2 ಮಿಲಿಯನ್ಗೂ ಅಧಿಕ ಮಂದಿಗೆ ಸೋಂಕು ತಗುಲಿರೋದು ಮಾತ್ರವಲ್ಲದೇ, ದೇಶದ ಆರ್ಥಿಕ ವ್ಯವಸ್ಥೆ ಮೇಲೂ ಭಾರೀ ಪ್ರಮಾಣದ ಹೊಡೆತ ನೀಡಿದೆ, ಕೇಂದ್ರ ಸರ್ಕಾರ ಜಾರಿ ಮಾಡಿದ ಲಾಕ್ಡೌನ್ ನಿಂದಾಗಿ ಅದೆಷ್ಟೋ ಉದ್ಯಮಗಳು ಸಂಪೂರ್ಣ ನೆಲಕಚ್ಚಿ ಹೋಗಿವೆ.