alex Certify BIG NEWS: ಶೇ. 4.4 ಕ್ಕೆ ಇಳಿದ ಭಾರತದ ಜಿಡಿಪಿ ಬೆಳವಣಿಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಶೇ. 4.4 ಕ್ಕೆ ಇಳಿದ ಭಾರತದ ಜಿಡಿಪಿ ಬೆಳವಣಿಗೆ

ಪ್ರಸಕ್ತ ಹಣಕಾಸು ವರ್ಷದ ಅಕ್ಟೋಬರ್-ಡಿಸೆಂಬರ್ ಮೂರನೇ ತ್ರೈಮಾಸಿಕದಲ್ಲಿ ಭಾರತದ ಭಾರತದ ಒಟ್ಟು ದೇಶೀಯ ಉತ್ಪನ್ನ(GDP) 4.4% ಬೆಳವಣಿಗೆಯನ್ನು ದಾಖಲಿಸಿದೆ

ಪ್ರಸಕ್ತ ಹಣಕಾಸು ವರ್ಷದ ಅಕ್ಟೋಬರ್-ಡಿಸೆಂಬರ್ ಮೂರನೇ ತ್ರೈಮಾಸಿಕದಲ್ಲಿ ಭಾರತದ ಒಟ್ಟು ದೇಶೀಯ ಉತ್ಪಾದನೆಯು 4.4% ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. 2022-23ರ ಮೂರನೇ ತ್ರೈಮಾಸಿಕದಲ್ಲಿ ಜಿಡಿಪಿಯು 40.19 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ. 2021-22 ರ ಮೂರನೇ ತ್ರೈಮಾಸಿಕದಲ್ಲಿ 38.51 ಲಕ್ಷ ಕೋಟಿ ರೂ.ಗೆ ಹೋಲಿಸಿದರೆ, ಶೇಕಡ 4.4 ರಷ್ಟು ಬೆಳವಣಿಗೆಯನ್ನು ತೋರಿಸುತ್ತದೆ ಎಂದು ಕೇಂದ್ರ ಅಂಕಿಅಂಶಗಳ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

2022-23ರ ಹಣಕಾಸು ವರ್ಷದಲ್ಲಿ, ನೈಜ ಜಿಡಿಪಿಯು 2021-22ರಲ್ಲಿ 9.1 ಪ್ರತಿಶತಕ್ಕೆ ಹೋಲಿಸಿದರೆ 7 ಪ್ರತಿಶತದಷ್ಟು ಬೆಳೆಯುತ್ತದೆ. ವರ್ಷದ ನಾಮಮಾತ್ರ GDP 15.9 ಪ್ರತಿಶತದಷ್ಟು ಬೆಳೆಯುತ್ತದೆ ಎಂದು ಅಂದಾಜಿಸಲಾಗಿದೆ.

ಮಂಗಳವಾರ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಭಾರತದ ಜಿಡಿಪಿ ಬೆಳವಣಿಗೆ ದರವು ಅಕ್ಟೋಬರ್-ಡಿಸೆಂಬರ್(Q3FY23) ನಲ್ಲಿ ಸತತ ಎರಡನೇ ತ್ರೈಮಾಸಿಕದಲ್ಲಿ ಶೇ. 4.4 ಕ್ಕೆ ಇಳಿದಿದೆ. 2022-23 ರ ಎರಡನೇ ತ್ರೈಮಾಸಿಕದಲ್ಲಿ ಕಂಡುಬಂದ ಶೇ. 6.3 ಬೆಳವಣಿಗೆಗಿಂತ ಇತ್ತೀಚಿನ ತ್ರೈಮಾಸಿಕ ಬೆಳವಣಿಗೆಯ ಸಂಖ್ಯೆ ಶೇ. 4.4 ಕಡಿಮೆಯಾಗಿದೆ.

ಆದಾಗ್ಯೂ, FY22 ರ ಅಂದಾಜುಗಳನ್ನು ಹಿಂದಿನ ಅಂದಾಜಿನ 8.7 ಪ್ರತಿಶತದ ವಿರುದ್ಧ ಶೇಕಡಾ 9 ಕ್ಕೆ ಪರಿಷ್ಕರಿಸಲಾಗಿದೆ. FY23 ರಲ್ಲಿ ಪ್ರಸ್ತುತ ಬೆಲೆಯಲ್ಲಿ ನಾಮಮಾತ್ರ GDP ಬೆಳವಣಿಗೆಯು FY22 ರಲ್ಲಿ 18.4 ಶೇಕಡಾಕ್ಕೆ ಹೋಲಿಸಿದರೆ 15.9 ಶೇಕಡಾ ಎಂದು ಅಂದಾಜಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...